ವರುಣನ ಆರ್ಭಟ: ಅಂಡರ್​ಪಾಸ್​ನಲ್ಲಿ ಸಿಲುಕಿದ 2 ಕೆಎಸ್ಆರ್​​ಟಿಸಿ ಬಸ್​​ಗಳು

ಬಳ್ಳಾರಿ: ಗಣಿನಾಡಿನಲ್ಲಿ ವರುಣನ ಆರ್ಭಟ ಜೋರಾಗಿದೆ. ನಗರದ ದುರ್ಗಮ್ಮ ದೇವಾಲಯದ ಬಳಿಯ ಅಂಡರ್​ಪಾಸ್​ನಲ್ಲಿ ಎರಡು  ಕೆಎಸ್ಆರ್​​ಟಿಸಿ ಬಸ್​​ಗಳು ಸಿಲುಕಿವೆ.  ಅಂಡರ್​ಪಾಸ್​ನಲ್ಲಿ ಮಳೆ ನೀರು ಹೆಚ್ಚಾದ ಪರಿಣಾಮ ಬಸ್​​ಗಳು  ಸಿಲುಕಿಕೊಂಡಿವೆ. ಬಸ್​ನಲ್ಲಿ ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.  ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು  ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv