ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣನ ಅರ್ಭಟ

ಹುಬ್ಬಳ್ಳಿ: ಮುಂಗಾರು ಮಳೆಯಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳಲು ಜನರು ಪರದಾಡುವಂತಾಗಿದೆ. ಭಾರೀ ಸುರಿಯುವ ಮಳೆಯ ಜೊತೆಗೆ ಮೊಡಕವಿದ ವಾತಾವರಣ ಕೂಡ ನಿರ್ಮಾಣ ಆಗಿದ್ದರಿಂದಾಗಿ ಎಲ್ಲ ಕೆಲಸಗಳು ಸ್ಥಗೀತಗೊಂಡಿವೆ.

ಅಲ್ಲದೇ ಕೃಷಿ ಚಟುವಟಿಕೆಗಳು ಸಹ ಮಳೆಯ ಜೊತೆಗೆ ಆರಂಭಗೊಂಡಿದ್ದು, ರೈತರು ಕೃಷಿ ಸಲಕರಣೆಗಳನ್ನು ಸಿದ್ಧಮಾಡಿಕೊಳ್ಳುತ್ತಿದ್ದಾರೆ. ಇನ್ನು, ಮುಂಗಾರಿನಲ್ಲಿ ಉತ್ತಮವಾಗಿ ಸುರಿದ ಮಳೆಯಿಂದಾಗಿ ರೈತರು ಹರ್ಷಗೊಂಡಿದ್ದಾರೆ. ಮುಂಗಾರುವಿನಲ್ಲಿ ಸುರಿದ ಮಳೆಗೆ ಜಿಲ್ಲೆಯ ಹಳ್ಳ, ನದಿಗಳು ಭರ್ತಿಯಾಗಿದೆ. ಬಿಸಿಲಿನಿಂದ ಬೇಸತ್ತಿದ್ದ ವಾಣಿಜ್ಯ ನಗರಿ ಜನರು ಈಗ ವರಣನ ಅರ್ಭಟಕ್ಕೆ ಮನಸೋತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv