ಶಿವಮೊಗ್ಗ -ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ, ಮತದಾನಕ್ಕೆ ಅಡ್ಡಿ

ಉತ್ತರ ಕನ್ನಡ: ಇಂದು ರಾಜ್ಯದಲ್ಲಿ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದೆ. ಜಿಲ್ಲೆಯ ಶಿರಸಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಮಳೆಯಿಂದ ಮತದಾನ ಪ್ರಮಾಣದಲ್ಲಿ ಇಳಿಕೆಯಾಗೋ ಸಾಧ್ಯತೆ ಹೆಚ್ಚಾಗುತ್ತ್ತದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಜಿಲ್ಲೆಯ ಮುಂಡಗೋಡಿನಲ್ಲಿ ವರುಣ ದೇವನ ಅಬ್ಬರದಿಂದ ಮತದಾನಕ್ಕೆ ಅಡ್ಡಿಯಾಗಿದೆ,  ಮತದಾನ ಮಾಡಲು ಮತಗಟ್ಟೆಗೆ ಆಗಮಿಸುತ್ತಿರುವ ಜನರ ಸಂಖ್ಯೆ  ಕಡಿಮೆಯಾಗುತ್ತಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ವರದಿ: ಈ ಮಧ್ಯೆ, ಗಾಳಿ-ಮಳೆ ಹಿನ್ನೆಲೆ, ಲೈಟ್ ಕಂಬ ಬಿದ್ದು ಸಾಗರ ತಾಲೂಕಿನ‌ ತಾಳಗುಪ್ಪ ಗ್ರಾಮದಲ್ಲಿ ಮತದಾನ ಸ್ಥಗಿತಗೊಂಡಿದೆ. ಮತಗಟ್ಟೆ ಸಂಖ್ಯೆ 272 ರಲ್ಲಿ ಅರ್ಧ ಗಂಟೆಯಿಂದ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದೆ. ಅಲ್ಲದೇ, ಭಾರಿ ಮಳೆಯಿಂದ ಜೋಗ ಕಾರ್ಗಲ್ ರಸ್ತೆಯಲ್ಲಿ‌ ಸಂಚಾರ ಅಸ್ತವ್ಯಸ್ತಗೊಂಡಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv