ಸಿಡಿಲಿನ ಹೊಡೆತಕ್ಕೆ ಹೊತ್ತಿ ಉರಿದ ತೆಂಗಿನ ಮರ

ಕೊಪ್ಪಳ: ಕೊಪ್ಪಳದ ಗಂಗಾವತಿಯಲ್ಲಿ ವರಣ ಅಬ್ಬರಿಸ್ತಿದ್ದಾನೆ. ಇಂದು ಗಂಗಾವತಿ ತಾಲೂಕಿನ ಮಲ್ಲಾಪುರದಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಹೊಲದಲ್ಲಿ ಕೆಲಸ ಮಾಡುವಾಗ ಏಕಾಏಕಿ ಸುರಿದ ಮಳೆ ಹಿನ್ನೆಲೆಯಲ್ಲಿ ತೆಂಗಿನ ಮರದ ಕೆಳಗೆ ಆಸರೆಗೆಂದು ನಾಲ್ವರು ಯುವಕರು ನಿಂತಿದ್ದರು. ಈ ವೇಳೆ ಆ ತೆಂಗಿನ ಮರಕ್ಕೆ ಸಿಡಿಲು ಬಡಿದು ತೆಂಗಿನ ಮರ ಸೀಳಿ, ಬೆಂಕಿ ಹೊತ್ತಿ ಉರಿಯಿತು. ಅದೃಷ್ಟವಶಾತ್​ ಮರದ ಕೆಳಗೆ ನಿಂತಿದ್ದವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಕೂದಲೆಳೆಯ  ಅಂತರದಿಂದ ಪಾರಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv