ಮೊಟ್ಟೆ ಅಂದ್ರೆ ಮೂಗು ಮುರೀತೀರಾ..? ಇಲ್ಲಿದೆ ಪರ್ಯಾಯ ಆಹಾರ..!

ಸಂಡೇ ಹೋ ಯಾ ಮಂಡೇ ರೋಸ್​ ಕಾವೋ ಅಂಡೆ ಅನ್ನೋ ಸರ್ಕಾರದ ಜಾಹೀರಾತು ಮಾಧ್ಯಮದಲ್ಲಿ ಬರ್ತಾನೆ ಇರುತ್ತೆ. ಮೂರ್ತಿ ಸಣ್ಣದಾದ್ರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ಮೊಟ್ಟೆ ನೋಡಲು ಸಣ್ಣದಾದರೂ ಆರೋಗ್ಯ ವೃದ್ಧಿಯಲ್ಲಿ ಅದರ ಕರಾಮತ್​ ಎಲ್ಲಕ್ಕಿಂತಲೂ ಮಿಗಿಲು. ಹಾಗಂತ ಎಲ್ಲರಿಗೂ ಮೊಟ್ಟೆ ಪ್ರಿಯವಲ್ಲ. ಸಸ್ಯಹಾರಿಗಳು ಮೊಟ್ಟೆಯ ಸೇವನೆಯನ್ನು ಬೇಡ ಎಂದರೆ ಮೊಟ್ಟೆಯಿಂದ ಅಲರ್ಜಿ ಇರುವವರಿಗೆ ಬೇಕೆಂದರೂ ತಿನ್ನೋಕಾಗದ ಪರಿಸ್ಥಿತಿ. ಹಾಗಂತ ಮೊಟ್ಟೆಯ ಪೌಷ್ಠಿಕಾಂಶ ನಮಗೆ ಸಿಗುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ, ಇಲ್ಲಿದೆ ಪರಿಹಾರ. ಮೊಟ್ಟೆಗೆ ಸರಿಸಾಟಿಯಾಗೋ ಪೌಷ್ಠಿಕಾಂಶ ಮತ್ತು ಹೊಟ್ಟೆಗೆ ಹಿತವೆನ್ನಿಸೋ ಆಹಾರಾಂಶದ ಬಗ್ಗೆ ನಾವು ಕೊಡ್ತೀವಿ ಮಾಹಿತಿ.

1. ಚಿಕನ್​
ಚಿಕನ್​ ಪ್ರಿಯರಿಗೆ ಇಲ್ಲಿದೆ ಸಂತೋಷದ ಸುದ್ದಿ. ರುಚಿಕರ ಮತ್ತು ಆರೋಗ್ಯಕ್ಕೆ ಹಿತಕರವಾದ ಆಹಾರ ಚಿಕನ್​. ಮಿತಿಮೀರಿದರೆ ಎಲ್ಲಾ ಹಾನಿಕರ ಎನ್ನುವ ಹಾಗೆ ಚಿಕನ್​ನ ಅತೀ ಹೆಚ್ಚು ಸೇವನೆಯೂ ಆರೋಗ್ಯಕ್ಕೆ ಒಳ್ಳೆದಲ್ಲ. ಕೇವಲ ಅರ್ಧಕಪ್​ನಷ್ಟು ಬೇಯಿಸಿದ ಚಿಕನ್​ ಕೊಡುತ್ತೆ, ಮೊಟ್ಟೆಗಿಂತ ಹೆಚ್ಚಿನ ಪೌಷ್ಠಿಕಾಂಶತೆ.

2. ಪನೀರ್​
ಪನೀರ್​ ಸಸ್ಯಹಾರಿಗಳ ಚಿಕನ್​ ಎಂದು ಹೇಳಿದ್ರೆ ತಪ್ಪಾಗಲಾರದು. ಹಾಲಿನಿಂದ ತಯಾರಿಸಲ್ಪಡುವ ಪನೀರ್‌ನ ಇಷ್ಟಪಡದವರ ಸಂಖ್ಯೆ ಅತಿ ವಿರಳ. ಕಡಿಮೆ ಕೊಬ್ಬಿನ ಜೊತೆ ಅಧಿಕ ಪೌಷ್ಠಿಕಾಂಶವನ್ನು ಹೊಂದಿರುತ್ತದೆ. ಹಾಲಿನ ಇತರ ಪದಾರ್ಥಗಳಿಗೆ ಹೋಲಿಸಿದರೆ ಪನೀರ್​ನ ಬೆಲೆ ಮತ್ತು ಅದರ ಪೌಷ್ಠಿಕಾಂಶ ಆರೋಗ್ಯಕ್ಕೆ ಲಾಭದಾಯಕವಾಗಿದೆ.

3. ಚೀಸ್​​ (ಗಿಣ್ಣು )
ಇತ್ತೀಚಿನ ದಿನಗಳಲ್ಲಿ ಜಂಕ್‌ಫುಡ್​ನ ಸೇವನೆ ದಿನೇ ದಿನೇ ಹೆಚ್ಚುತ್ತಿದೆ. ಜಂಕ್‌ಫುಡ್​ ಆರೋಗ್ಯಕ್ಕೆ ಹಾನಿಕರ ಎಂಬುದು ತಿಳಿದ ವಿಷಯ. ಅಂತಹ ತಿಂಡಿತಿನಿಸುಗಳಲ್ಲಿ ಪಿಜ್ಜಾನೂ ಒಂದು. ಪಿಜ್ಜಾನ ಇಷ್ಟರವರೆಗೆ ಸಂಪೂರ್ಣವಾಗಿ ಹಾನಿಕಾರವೆಂದು ಹೇಳದೆ ಇರಲು ಮುಖ್ಯ ಕಾರಣ ಅದರಲ್ಲಿರುವ ಮೊಜಾರೆಲ್ಲಾ ಚೀಸ್​. ಒಂದು ಔನ್ಸ್​ ಮೊಜಾರೆಲ್ಲಾ ಚೀಸ್ ಸೇವನೆಯಲ್ಲಿ 6.5 ಗ್ರಾಂ ನಷ್ಟು ಪೌಷ್ಠಿಕಾಂಶತೆಯನ್ನು ಹೊಂದಿದೆ. ಅದಲ್ಲದೆ ಇದರಲ್ಲಿರುವ ವಿಟಮಿನ್​-ಡಿ ಮುಪ್ಪಿನಲ್ಲಿ ಎದುರಾಗುವ ಮೂಳೆ ಸಮಸ್ಯೆಗೂ ರಾಮಬಾಣವಾಗಿದೆ.

4. ಧಾನ್ಯಗಳು
ಏಷ್ಯದಲ್ಲಿ ಅತೀ ಹೆಚ್ಚು ಬೆಳೆಸುವಂತಹ ಹೆಸರುಕಾಳು, ಕಿಡ್ನಿ ಬೀನ್ಸ್​, ಕಪ್ಪು ಹುರುಳಿ ಇಂತಹ ಧಾನ್ಯಗಳು ಗಾತ್ರದಲ್ಲಿ ಮೊಟ್ಟೆಗಿಂತ ಸಣ್ಣದಾಗಿದ್ದರೂ, ಮೊಟ್ಟೆಯಲ್ಲಿ ಎಲ್ಲಾ ಪೌಷ್ಠಿಕಾಂಶಗಳನ್ನ ಹೊಂದಿದೆ. ಇದರಲ್ಲಿರುವ ವಿಟಮಿನ್​ ‘ಸಿ’ ಮೆದುಳಿನ ಕೋಶದಲ್ಲಿರುವ ತೊಡಕುಗಳಿಗೆ ಪರಿಹಾರ ನೀಡುತ್ತೆ. ಅದಲ್ಲದೆ ಬೇಯಿಸಿದ ಧಾನ್ಯಗಳಲ್ಲಿ 7.5 ಗ್ರಾ.ಂ ನಷ್ಟು ಪೌಷ್ಠಿಕಾಂಶವನ್ನು ಹೊಂದಿದೆ.

5. ಕೂಸುಗಡ್ಡೆ (ಬ್ರೊಕೊಲಿ)
ತರಕಾರಿಗಳಲ್ಲಿ ಅತೀ ಹೆಚ್ಚು ಪೌಷ್ಠಿಕಾಂಶ ಹೊಂದಿದ ತರಕಾರಿ ಬ್ರೊಕೊಲಿ. ಇದರಲ್ಲಿ ವಿಟಮಿನ್​ ಸಿ, ಕೆ ಮತ್ತು ಫೈಬರ್​ನ ಗುಣವಿದೆ. ಒಂದು ಕಪ್​ ಬ್ರೊಕೊಲಿ ಮೂರು ಗ್ರಾಂನಷ್ಟು ಪ್ರೊಟೀನ್ ಹೊಂದಿದೆ.
ದಿನದಿಂದ ದಿನಕ್ಕೆ ಮನುಷ್ಯನ ಆರೋಗ್ಯ ಒಂದಲ್ಲ, ಒಂದು ರೀತಿಯಲ್ಲಿ ಹದಗೆಡುತ್ತಾನೆ ಇರುತ್ತೆ. ಆರೋಗ್ಯದ ರಕ್ಷಣೆಗಾಗಿ ಇಂತಹ ಆಹಾರ ಪದ್ಧತಿಯನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿವುದು ಜಾಣತನವೇ ಸರಿ.

ವಿಶೇಷ ಬರಹ -ಪ್ರಫುಲ್ಲ ಕೋಟ್ಯಾನ್​

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv