‘ಮಾಜಿ- ಹಾಲಿ ಸಿಎಂ ನಡುವೆ ಯಾವ ಭಿನ್ನಮತವೂ ಇಲ್ರೀ..!’

ಬಾಗಲಕೋಟೆ: ಹೆಚ್​ಡಿಕೆ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಮತ ಇಲ್ಲ. ಅದೆಲ್ಲಾ ಮಾಧ್ಯಮ ಸೃಷ್ಟಿ ಅಷ್ಟೇ. ಭಿನ್ನಮತ ಇದ್ದಿದ್ರೆ ಇಬ್ಬರೂ ಸಮನ್ವಯ ಸಮಿತಿ ಸಭೆಗೆ ಯಾಕೆ ಬರುತ್ತಿದ್ರು ಅಂತಾ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿದ್ದಾರೆ.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸಲ್ಲ ಎಂಬ ಬಿಜೆಪಿ ಮಾತಿಗೆ ಪ್ರತಿಕ್ರಿಯಿಸಿ, ಒಂದು ವರ್ಷ ಆದ್ಮೇಲೇ ಅದಕ್ಕೆ ಉತ್ತರ ಸಿಗುತ್ತೆ ಅಂತಾ ತಿರುಗೇಟು ನೀಡಿದ್ರು. ಅಲ್ಲದೆ ಬಿಸಿ ಪಾಟೀಲ್, ಬೇರೆ ಪಕ್ಷಕ್ಕೆ ಹೋಗಲ್ಲ, ನಮ್ಮ ಜೊತೆಗೇ ಇರ್ತಾರೆ ಅಂತಾನೂ ಸ್ಪಷ್ಟೀಕರಣ ನೀಡಿದ್ರು.
ಇನ್ನು ನನಗೆ ಯಾವ ಜಿಲ್ಲೆಯ ಉಸ್ತುವಾರಿ ಕೊಟ್ಟರೂ ಸಂತೋಷವೇ. ಅಲ್ಲದೆ ನಿಗಮ ಮಂಡಳಿ ಹಂಚಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ, ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು‌. ಸದ್ಯ 357 ವೈದ್ಯರ ನೇಮಕ ಪ್ರಕ್ರಿಯೆ ನಡೆದಿದೆ. ನಾನು ಈಗ ಬಂದಿದ್ದೇನೆ. ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳೋದಿಲ್ಲ ಎಂದ ಅವರು, ತಮ್ಮ ಇಲಾಖೆಯಲ್ಲಿನ ಲೋಪದೋಷಗಳ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv