ಕರುಳು ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತೆ ಖರ್ಜೂರ..!

ಖರ್ಜೂರ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಚಿಕ್ಕವರಿನಿಂದ ಹಿಡಿದು ದೊಡ್ಡವರಿಗೂ ಖರ್ಜೂರ ಅಂದ್ರೆ ತುಂಬಾ ಇಷ್ಟ. ಖರ್ಜೂರದಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿದ್ದು,  ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರಿಂದ ತೂಕ ಕಳೆದುಕೊಳ್ಳಲು ಬಯಸುವವರೂ ಇದನ್ನು ಸೇವಿಸಬಹುದು. ಖರ್ಜೂರದಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ಹಾಗಾಗಿ ಇದು ಎಲುಬು ಮತ್ತು ಹಲ್ಲನ್ನ ಗಟ್ಟಿಗೊಳಿಸುತ್ತದೆ. ಅಷ್ಟೇ ಅಲ್ಲದೆ, ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆಯಿಂದ ಬರುವ ಆರ್ಥರೈಟಿಸ್ ಸಮಸ್ಯೆಯಿಂದಲೂ ಮುಕ್ತಿ ಪಡೆಯಬಹುದು.

1. ಖರ್ಜೂರದಲ್ಲಿ ನ್ಯಾಚುರಲ್​ ಶುಗರ್​, ಗ್ಲುಕೋಸ್, ಫ್ರುಕ್ಟೋಸ್ ಮತ್ತು ಸುಕ್ರೋಸ್​ಗಳಂತ ಆರೋಗ್ಯಕರ ಅಂಶಗಳು ಸಮೃದ್ಧವಾಗಿದೆ. ಅದು ನಿಮಗೆ ಕ್ವಿಕ್​, ಲಾಂಗ್​ಲಾಸ್ಟಿಂಗ್​ ಎನರ್ಜಿಯನ್ನ ನೀಡುತ್ತದೆ. ಎನರ್ಜಿ ಡಿಂಕ್ಸ್​ಗಳಿಗೆ ಹೋಲಿಸಿದ್ರೆ, ಫೈಬರ್, ಪೊಟ್ಯಾಸಿಯಮ್, ಮೆಗ್ನೀಶಿಯಂ, ವಿಟಮಿನ್ಸ್ ಮತ್ತು ಆ್ಯಂಟಿಆ್ಯಕ್ಸಿಡೆಂಟ್​ಗಳಂತಹ ಇತರೆ ಆರೋಗ್ಯಕರ ಅಂಶಗಳು ಇದರಲ್ಲಿವೆ.

2. ಜೀರ್ಣಕ್ರಿಯೆ ಸರಿಯಾಗಿ ಆಗದಿದ್ರೆ ಹೊಟ್ಟೆನೋವು, ಮಲಬದ್ದತೆಯಂತ ಸಮಸ್ಯೆಗಳು ಬಾಧಿಸುತ್ತದೆ. ಉತ್ತಮ ಜೀರ್ಣಕ್ರಿಯೆಗಾಗಿ ಫೈಬರ್​ ಅಂಶ ತುಂಬಾ ಮುಖ್ಯ. ಅದಕ್ಕಾಗಿ ಪ್ರತಿನಿತ್ಯ ಒಂದು ಕಪ್​ ಖರ್ಜೂರವನ್ನ ಸೇವಿಸಿದ್ರೆ, 12 ಗ್ರಾಂನಷ್ಟು ಫೈಬರ್​ ಪಡೆಯಬಹುದು. ಇದು ನಿಮ್ಮ ದೇಹಕ್ಕೆ ದಿನಕ್ಕೆ ಅವಶ್ಯವಿರುವ 48% ಫೈಬರ್​ ಒದಗಿಸುತ್ತದೆ. ಸರಿಯಾದ ಪ್ರಮಾಣದ ಮತ್ತು ಸರಿಯಾದ ರೀತಿಯ ಫೈಬರ್ ಮಲಬದ್ಧತೆಯನ್ನು ತಡೆಗಟ್ಟುತ್ತದೆ.

3. ಖರ್ಜೂರ ಕರುಳಿನಲ್ಲಿ ಉಂಟಾಗುವ ಹಾನಿಕಾರಕ ಬ್ಯಾಕ್ಟೀರಿಯಾವನ್ನ ನಾಶಮಾಡಿ, ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಮಾಡುತ್ತದೆ. ಖರ್ಜೂರದಲ್ಲಿ ಕೊಲೊನ್ ಎಂಬ ಅಂಶವಿದ್ದು, ಆರೋಗ್ಯವನ್ನು ಹೆಚ್ಚಿಸೋದ್ರ ಜೊತೆಗೆ ಗಟ್​ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಕೊಲೊನ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆದು ಕರುಳಿನ ಕ್ಯಾನ್ಸರ್​ ಅಪಾಯವನ್ನ ಕಡಿಮೆ ಮಾಡುತ್ತದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv