ಈ ಸಲ ಕಪ್ ನಮ್ಮದೇ: ಹೆಚ್​ಡಿಕೆ

ಚನ್ನಪಟ್ಟಣ: ಐಪಿಎಲ್ ಕಪ್ ನಮ್ಮದೇ, ಐಪಿಎಲ್ ಗೆಲುವು ನಮ್ಮದೇ ಅನ್ನೋ ತರ ಈ ಬಾರಿ ಜೆಡಿಎಸ್ ಮತ್ತು ಆರ್​ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂದು ಎಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ಪ್ರಚಾರ ಮಾಡಿದ ಹೆಚ್​. ಡಿ. ಕುಮಾರ ಸ್ವಾಮಿ, ನಾವು ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಮ್ಮ ಮೈತ್ರಿ ಏನಿದ್ದರೂ ಜೆಡಿಎಸ್ ಹಾಗೂ ಬಿಎಸ್​ಪಿ ಇಬ್ಬರ ಜೊತೆಗೆ ಮಾತ್ರ ಅಂತಾ ಸ್ಪಷ್ಟ ಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪುತ್ರ ವ್ಯಾಮೋಹ ಮಾಡುತ್ತಿದ್ದಾರೆ
ಮಗನನ್ನು ಬೆಳೆಸಲು ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪಲಾಯನ ಮಾಡುತ್ತಿದ್ದಾರೆ. ನಮ್ಮನ್ನು ಅಪ್ಪ ಮಕ್ಕಳ ಪಕ್ಷ ಎನ್ನುತ್ತಾರೆ. ಆದರೆ ಅವರದು ಯಾವ ಪಕ್ಷ ? ಮಗನನ್ನು ವರುಣ ಕ್ಷೇತ್ರದಲ್ಲಿ ನಿಲ್ಲಿಸಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ನಿಲ್ಲಲು ಪ್ಲಾನ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಪುತ್ರ ವ್ಯಾಮೋಹ ಮಾಡುತ್ತಿದ್ದಾರೆ. ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯನವರ ಕೊಬ್ಬನ್ನು ಅಡಗಿಸಲು ಜಿ.ಟಿ ದೇವೇಗೌಡ ತಯಾರಾಗಿದ್ದಾರೆ ಅಂತಾ ಹೆಚ್.ಡಿ ಕುಮಾರ ಸ್ವಾಮಿ ಎಚ್ಚರಿಸಿದ್ರು. ಚನ್ನಪಟ್ಟಣದಲ್ಲಿ ಸಮಾವೇಶದ ನಂತರ ಬಿಎಸ್​ಪಿ ಅಭ್ಯರ್ಥಿ ಎನ್. ಮಹೇಶ್ ಪರ ಪ್ರಚಾರ ಮಾಡಲು ಹೆಲಿಕಾಪ್ಟರ್ ಮೂಲಕ, ಕುಮಾರಸ್ವಾಮಿಯವರು ಕೊಳ್ಳೇಗಾಲಕ್ಕೆ ತೆರಳಿದ್ರು.

Leave a Reply

Your email address will not be published. Required fields are marked *