2 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿರುವ ಹೆಚ್​ಡಿಕೆ ಮಾಸ್ಟರ್​ ಪ್ಲಾನ್​..!

ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನಕಳೆದಂತೆ ರಂಗೇರುತ್ತಿದೆ. ಜಿದ್ದಾಜಿದ್ದಿನ ಅಖಾಡಗಳಲ್ಲಿ ಬದ್ಧ ವೈರಿಗಳ ವಿರುದ್ಧ ರಾಜ್ಯ ನಾಯಕರು ಸವಾಲಿನ ಮೇಲೆ ಸವಾಲು ಎಸೆಯುತ್ತಿದ್ದಾರೆ. ಹಾಲಿ ಮಾಜಿ ಸಿಎಂಗಳು ಸ್ಪರ್ಧಿಸೋ ಕ್ಷೇತ್ರಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆ ಕ್ಷೇತ್ರಗಳ ಪಟ್ಟಿಗೆ ಈಗ ಚನ್ನಪಟ್ಟಣ ಕ್ಷೇತ್ರ ಹೊಸದಾಗಿ ಸೇರ್ಪಡೆಯಾಗಿದೆ.

ಯೋಗೇಶ್ವರ್​ ವಿರುದ್ಧ ತೊಡೆ ತಟ್ಟಿದ ಮಾಜಿ ಸಿಎಂ

ರಾಮನಗರದಿಂದ ಸ್ಪರ್ಧಿಸಲಿರುವ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​.ಡಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲೂ ಬಲಪ್ರದರ್ಶನಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರ್ಪಡೆಗೊಂಡಿರುವ ಸಿಪಿ ಯೋಗೇಶ್ವರ್​ ವಿರುದ್ಧ ತೊಡೆತಟ್ಟಿದ್ದಾರೆ. ರಾಮನಗರದ ಜೊತೆಗೆ ಚನ್ನಪಟ್ಟಣದಲ್ಲೂ ಸ್ಪರ್ಧಿಸಲು ಹೆಚ್​ಡಿಕೆ ಪ್ಲಾನ್​ ಮಾಡಿದ್ದಾರೆ.

ಲೋಕಸಭೆ ಚುನಾವಣೆ ಮೇಲೆ ಹೆಚ್​ಡಿಕೆ ಕಣ್ಣು
ಇನ್ನು, ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯ ಮೇಲೆ ಹಿಡಿತ ಸಾಧಿಸಲು ಹೆಚ್​ಡಿಕೆ ಚನ್ನಪಟ್ಟಣದಿಂದ ಸ್ಪರ್ಧಿಸೋ ಮಾಸ್ಟರ್​ ಪ್ಲಾನ್​ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಯ ಗಮನದಲ್ಲಿಟ್ಟುಕೊಂಡು ಎರಡೂ ಕ್ಣೇತ್ರಗಳಲ್ಲಿ ಹೆಚ್​ಡಿಕೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಚನ್ನಪಟ್ಟಣದ ಭಾಗದ ನೀರಾವರಿ ಸಮಸ್ಯೆಗಳಿಗೆ ಶ್ರಮಿಸಿರುವ ಯೋಗೇಶ್ವರ್​ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಒಂದು ವೇಳೆ ವಿಧಾನಸಭೆ ಚುನಾವಣೆಯಲ್ಲಿ ಯೋಗೇಶ್ವರ್​ ಗೆದ್ದರೆ ಲೋಕಸಭಾ ಚುನಾವಣೆಯ ಲೆಕ್ಕವೂ ಉಲ್ಟಾ ಆಗಲಿದೆ ಅನ್ನೋದು ಹೆಚ್​ಡಿಕೆ ಅಭಿಪ್ರಾಯ. ಹೀಗಾಗಿ ಯೋಗೇಶ್ವರ್ ಹಣೆಯಲು ಹೆಚ್​ಡಿಕೆ ಡಿ.ಕೆ. ಶಿವಕುಮಾರ್ ಕುಟುಂಬಸ್ಥರ ಸಹಾಯ ಪಡೆಯುತ್ತಿದ್ದಾರೆ ಅನ್ನೋ ಸುದ್ದಿಯೂ ಹರಿದಾಡ್ತಿದೆ. ಒಂದು ವೇಳೆ ಚನ್ನಪಟ್ಟಣ ರಾಮನಗರ ಎರಡೂ ಕ್ಷೇತ್ರಗಳಲ್ಲೂ ಕುಮಾರಸ್ವಾಮಿ ಗೆದ್ದರೆ, ಯಾವುದಾದರೂ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿ ಗೆಲ್ಲಿಸುವುದು ಕುಮಾರಸ್ವಾಮಿ ಪ್ಲಾನ್

ಯೋಗೇಶ್ವರ್ ಮೇಲೆ ಕುಮಾರಸ್ವಾಮಿಗೆ ಸಿಟ್ಟೇಕೆ?
ಯೋಗೇಶ್ವರ್ ಈ ಬಾರಿ ಸ್ವಕ್ಷೇತ್ರ ಚನ್ನಪಟ್ಟಣವನ್ನು ಸಹೋದರ ಅಥವಾ ಮಗಳಿಗೆ ಬಿಟ್ಟುಕೊಟ್ಟು, ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಲು ರೂಪುರೇಷೆ ರೆಡಿ ಮಾಡಿಕೊಂಡಿದ್ರು. ಹೇಳಿ ಕೇಳಿ ಮಂಡ್ಯ ಜಿಲ್ಲೆಯ ಮದ್ದೂರು ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರ. ಜೆಡಿಎಸ್ ಭದ್ರಕೋಟೆಗೆ ಯೋಗೇಶ್ವರ್ ಕಣ್ಣಿಟ್ಟಿದ್ದೇ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಬರಲು ಕಾರಣ ಅಂತ ಹೇಳಲಾಗ್ತಿದೆ. ಇತ್ತ ಯೋಗೇಶ್ವರ್ 2013ರ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಗೆದ್ದ ಬಳಿಕ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿದ್ರು. ತಮ್ಮ ಸಹೋದರನನ್ನು ಕೂಡ ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಿದ್ರು. ಪಕ್ಷ ಅಧಿಕಾರದಲ್ಲಿ ಇರುವವರಿಗೂ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಈಗ ಬಿಜೆಪಿಗೆ ಯೋಗೇಶ್ವರ್ ಹೋಗಿರುವುದು ಡಿಕೆ ಶಿವಕುಮಾರ್​ ಕಣ್ಣು ಕೆಂಪಾಗಿಸಿದೆ. ಹೀಗಾಗಿ ಯೋಗೇಶ್ವರ್​ ಕಟ್ಟಿ ಹಾಕಬೇಕೆಂದು ಕುಮಾರಸ್ವಾಮಿ ಮತ್ತು ಡಿಕೆಶಿ ರಣತಂತ್ರ ರೂಪಿಸುತ್ತಿದ್ದಾರೆ. ಇದರ ಜೊತೆಗೆ ಚನ್ನಪಟ್ಟಣದಲ್ಲಿ ಒಕ್ಕಲಿಗ ಸಿಎಂ ಅಭ್ಯರ್ಥಿ ಎಂಬ ಟ್ರಂಪ್​ ಕಾರ್ಡ್ ಪ್ಲೇ ಮಾಡಲು ಹೆಚ್​ಡಿಕೆ ಮುಂದಾಗಿದ್ದಾರೆ. ಇನ್ನು, ಚನ್ನಪಟ್ಟಣ ಕ್ಷೇತ್ರ ಕುಮಾರಸ್ವಾಮಿಗೆ ಎಷ್ಟು ವರದಾನವಾಗಬಹುದು, ಎಷ್ಟು ಉಲ್ಟಾ ಹೊಡೀಬಹುದು ಅನ್ನೋದನ್ನ ನೋಡೋದಾದ್ರೆ

ಪ್ಲಸ್​ಗಳು

  • ಕುಮಾರಸ್ವಾಮಿ ಒಕ್ಕಲಿಗ ಸಮುದಾಯದ ಲೀಡರ್ ಹಾಗೂ ಸಿಎಂ ಅಭ್ಯರ್ಥಿ
  • ಹಳೇ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆಯಾಗಿರುವುದು ವರದಾನವಾಗಬಹುದು
  • ಒಕ್ಕಲಿಗ ಮತಗಳು ಜೆಡಿಎಸ್​ಗೆ ಸಲೀಸಾಗಿ ಹರಿದುಬರುವ ಸಾಧ್ಯತೆ
  • ಮುಖ್ಯಮಂತ್ರಿಗಳೇ ಕ್ಷೇತ್ರದ ಶಾಸಕರಾದರೆ ಯೋಜನೆಗಳು ಹೆಚ್ಚಾಗಿ ಬರುವ ನಿರೀಕ್ಷೆ

ಮೈನಸ್​ಗಳು

  • ಯೋಗೇಶ್ವರ್ ಚನ್ನಪಟ್ಟಣದ ನೀರಾವರಿ ಯೋಜನೆಗೆ ಸಾಕಷ್ಟು ಶ್ರಮಿಸಿದ್ದಾರೆ. ಕ್ಷೇತ್ರದ ಜನತೆಯಿಂದ ಭಗೀರಥ ಎಂಬ ಖ್ಯಾತಿ ಪಡೆದಿದ್ದಾರೆ
  • ಕ್ಷೇತ್ರದ ಜನತೆಯ ಜೊತೆಗೆ ಯೋಗೇಶ್ವರ್ ನೇರವಾಗಿ ಸಂಪರ್ಕದಲ್ಲಿದ್ದಾರೆ
  • ಯೋಗೇಶ್ವರ್​ ನಿರಂತರ ಗೆಲುವು ಸಾಧಿಸಿರುವುದು ಕುಮಾರಸ್ವಾಮಿಗೆ ತಲೆನೋವು ತರಬಲ್ಲದು

Leave a Reply

Your email address will not be published. Required fields are marked *