ಮಾಧ್ಯಮಗಳ ಮೇಲೆ ಮತ್ತೆ ಸಿಎಂ ಮುನಿಸು: ಕ್ಯಾಮರಾಗೆ ಅಡ್ಡಲಾಗಿ ನಿಂತ ಪೊಲೀಸರು!

ಬೆಂಗಳೂರು: ಸಿಎಂ ಕುಮಾರಸ್ವಾಮಿ ಒಂದಲ್ಲ ಒಂದು ವಿವಾದವನ್ನ ಮೈ ಮೇಲೆ ಎಳೆದುಕೊಳ್ಳುವಂತಿದೆ. ಮಾಧ್ಯಮಗಳಿಗೆ ಕಡಿವಾಣ ಹಾಕಲು ನಿರ್ಧರಿಸಿರೋ ಸಿಎಂ ಹೆಚ್‌ಡಿಕೆ, ಇಂದು ವಿಧಾನಸೌಧದಲ್ಲಿ ಕ್ಯಾಮರಾಗಳಿಗೆ ಅಡ್ಡವಾಗಿ ನಿಲ್ಲುವಂತೆ ಪೊಲೀಸರಿಗೆ ಸೂಚಿಸಿರುವ ಪ್ರಸಂಗ ನಡೆದಿದೆ. ಮುಖ್ಯಮಂತ್ರಿಗಳಿಂದ ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಮುಂದಾದಾಗ ಸಿಎಂ ಪೊಲೀಸರಿಗೆ ಕ್ಯಾಮರಾಗಳಿಗೆ ಅಡ್ಡಲಾಗಿ ನಿಲ್ಲುವಂತೆ ನಿರ್ದೇಶಿಸಿದ್ದಾರೆ. ಸಿಎಂ ಸೂಚನೆ ಮೇರೆಗೆ ಪೊಲೀಸರು ಸಿಎಂ ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಉದ್ದೇಶಪೂರ್ವಕವಾಗಿ ಅಡ್ಡಲಾಗಿ ನಿಂತರು. ನಿನ್ನೆಯಷ್ಟೇ ಮಾಧ್ಯಮಗಳಿಂದ ನಾನು ದೂರ ಇರಲು ಬಯಸಿದ್ದೇನೆ ಎಂದು ಸಿಎಂ ಹೇಳಿಕೆ ನೀಡಿದ್ದರು. ಇಂದು ಅದನ್ನು ಪೊಲೀಸರ ಮೂಲಕ ಕಾರ್ಯರೂಪಕ್ಕೆ ತಂದಿದ್ದಾರೆ. ಉದ್ದೇಶಪೂರ್ವಕವಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ದೂರವಿಡುತ್ತಿದ್ದು, ಹಿರಿಯ ಪತ್ರಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.