ಬಿಜೆಪಿ ನಡೆಸುವ ಹೈಡ್ರಾಮ ನೋಡಿ‌ ಖುಷಿಪಡುವೆ: ಸಿ.ಎಂ ಕುಮಾರಸ್ವಾಮಿ

ಹಾಸನ: ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡೋ ವಿಚಾರವಾಗಿ ಮಾತನಾಡಿದ ಸಿ.ಎಂ ಕುಮಾರಸ್ವಾಮಿ ಈ ಸುದ್ದಿ ಹೊಸದಲ್ಲ, ಎಲ್ಲರನ್ನೂ ವಿಶ್ವಾಸ ಪಡೆಯೋ ಕೆಲಸ ಮಾಡಲಾಗುವುದು. ಸರ್ಕಾರ ಬೀಳಿಸಲು ಬಿಜೆಪಿಯ ಎಲ್ಲಾ ನಾಯಕರು ಕಾಯುತ್ತಿದ್ದಾರೆ. ನಮ್ಮ ಶಾಸಕರನ್ನು ಉಳಿಸಿಕೊಳ್ಳೋ ಕೆಲಸ ನಾವು ಮಾಡುತ್ತೇವೆ.

ಬಿಜೆಪಿಯವರು ಮೇ 23 ರ ನಂತರ ಸರ್ಕಾರ ಬೀಳಲಿದೆ ಎಂದು ನಮಗೆ ಗಡುವು ಕೊಟ್ಟಿದ್ದಾರೆ. ನಮ್ಮೊಟ್ಟಿಗೆ  ಡ್ರಾಮ ಮಾಡುವವರನ್ನು ನಮಗೆ  ಹಿಡಿದುಕೊಳ್ಳಲು ಆಗಲ್ಲ ಎಂದರು. ಇನ್ನು ರಾಜ್ಯದಲ್ಲಿ ಬರಗಾಲ ಇದೆ, ಆ ಬಗ್ಗೆ ಚರ್ಚಿಸಲು 26 ರ ನಂತರ ಅಧಿಕಾರಿಗಳ ಸರಣಿ ಸಭೆ ನಡೆಸುತ್ತೇನೆ. ನನ್ನ ಸರ್ಕಾರ ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇನ್ನು ಇದಕ್ಕಾಗಿ ಬಿಜೆಪಿಯವರು ನಡೆಸುವ ಹೈಡ್ರಾಮ ನೋಡಿ‌ ಖುಷಿಪಡುವೆ. ಮಂಡ್ಯ, ತುಮಕೂರು, ಹಾಸನದಲ್ಲಿ ಜೆಡಿಎಸ್ ಗೆಲ್ಲಲಿದೆ. ಫಲಿತಾಂಶದ ನಂತರ ಕೆಲವು ಮಾಧ್ಯಮಗಳಿಗೆ ನಿರಾಶೆ ಕಾದಿದೆ ಎಂದು ಮಾಧ್ಯಮಗಳಿಗೆ ಟಾಂಗ್​​ ನೀಡಿದ ಸಿಎಂ ಕುಮಾರಸ್ವಾಮಿ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv