‘ಮೋದಿ ಮನಸ್ಥಿತಿ ಸರಿಯಿಲ್ಲ’ ದೇವೆಗೌಡ ವಾಗ್ದಾಳಿ

ರಾಯಚೂರು: ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆ ಆಗಿ ಒಂದು ವರ್ಷ ಆಗಿದೆ. ಎಲ್ಲಾರು ಸೇರಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ದೇಶಕ್ಕೆ ಮಾರಕ ಆಗುವಂತಹ ಆಡಳಿತ ಮೋದಿ ನೀಡಿದ್ದಾರೆ. ಈ ಭಾಗದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾದ ಬಿ ವಿ ನಾಯಕ್ ಗೆ ಮತ ನೀಡಬೇಕೆಂದು ಮಾಜಿ ಪ್ರಧಾನಿ ದೇವೇಗೌಡರ ಮನವಿ ಮಾಡಿದ್ರು. ಅಲ್ಲದೇ, ಹಣಕಾಸಿನ ಕೆಟ್ಟ ಪರಿಸ್ಥಿತಿ ಇದ್ದರು ಹೊರಗಡೆಯಿಂದ ಹಣ ತಂದು ಆಲಮಟ್ಟಿ ಡ್ಯಾಂ ಗಾಗಿ ಶ್ರಮಿಸಿದ್ದೇನೆ. ಸಾಲಮನ್ನಾ ಮಡಲು ಕುಮಾರಸ್ವಾಮಿ ಕಂಕಣ ಬದ್ಧರಾಗಿದ್ದಾರೆ ಎಂದರು.

ಇನ್ನು ಇದೇ ವೇಳೆಯಲ್ಲಿ ಕಲಬೆರಕೆ ಸರ್ಕಾರ ಎಂದು ಮೋದಿ ಟೀಕೆಗೆ ದೇವೆಗೌಡರು ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿಯಾಗಿ ಏನು ಮಾತನಾಡುತ್ತಿದ್ದೇನೆ ಅನ್ನೊ ಯೋಚನೆ ಮೋದಿಗಿರಬೇಕು. ಅವರ ಮನಸ್ಥಿತಿ ಸರಿಯಿಲ್ಲ. ಮೋದಿ ಮನಸ್ಸಿನ ಸ್ಥಿಮಿತ ಕಳೆದುಕೊಂಡಿದ್ದಾರೆ. ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಕಲಬೆರಕೆ ಸರ್ಕಾರ ಎನ್ನುತ್ತಿದ್ದಾರೆ. ಪ್ರಧಾನಿ ಮೋದಿಗೆ ಇದು ಶೋಭೆ ತರುವಂಥದ್ದಲ್ಲ. ಇಷ್ಟು ಕೆಳಮಟ್ಟದಲ್ಲಿ ಮಾತಾಡುವ ಪ್ರಧಾನಿಯನ್ನ ನಾನು ಇಲ್ಲಿ ತನಕ ನೋಡಿಲ್ಲ.  ಕಾಂಗ್ರೆಸ್ ಮುಕ್ತ ಭಾರತ ಭ್ರಷ್ಟಾಚಾರ ಮುಕ್ತ ಭಾರತ ಮಾಡ್ತೇವೆ ಅಂತ ಮೋದಿ ಹೇಳಿದ್ದಾರೆ. ರೈತರ ಬಗ್ಗೆ ಕಿಂಚಿತ್ತು ಜಾಳಜಿ ಇಲ್ಲ. ಲಘುವಾಗಿ ಮಾತನಾಡುವ ಇಂತಹ ಪ್ರಧಾನಿಯನ್ನು ನಾನು ನೋಡೇ ಇಲ್ಲ. ಮೋದಿಯ 6೦೦೦ ಸಾವಿರ ರೂಪಾಯಿಯಿಂದ ಕುಟುಂಬದಲ್ಲಿ ಮೂರು ಜನ ಇದ್ದರೆ 15 ರೂಪಾಯಿ ಸಿಗೋದಿಲ್ಲ. ಹಾಗಾಗಿ ರಾಯಚೂರು ಲೋಕಸಭೆ ಅಭ್ಯರ್ಥಿ ಭಗವಂತರಾಯ ನಾಯಕ್ ಗೆಲ್ಲಿಸಬೇಕೆಂದು ಕೈ ಮುಗಿದು ದೇವೆಗೌಡ್ರು ಕೇಳಿಕೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv