ನಾನು ಪಾಕಿಸ್ತಾನಕ್ಕೆ ಐದು ಬಾರಿ ಹೋಗಿದ್ದೆ‌, ಯಾರೂ ನನಗೆ ಹೊಡೆದಿಲ್ಲ-ಹೆಚ್​​.ಡಿ ದೇವೆಗೌಡ

ಉತ್ತರ ಕನ್ನಡ: ಲೋಕಸಭಾ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರ ಮಾಜಿ ಪ್ರಧಾನಿ ದೇವೆಗೌಡರು ಅಬ್ಬರದ ಪ್ರಚಾರ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮಾಜಿ ಪ್ರಧಾನಿ ದೇವೆಗೌಡರು ನಾನು ಕೂಡ ಹಿಂದೂ ಧರ್ಮದವನೇ. ನಾನೂ ಎಲ್ಲಾ ದೇವಸ್ಥಾನಕ್ಕೆ ಹೋಗುತ್ತೇನೆ. ಕಾನೂನು ಬದಲಾವಣೆ ಮಾಡುವವರನ್ನ ನಾವು ಗೆಲ್ಲಿಸಬೇಕಾ.? ಎಂದು ಅನಂತಕುಮಾರ ಹೆಗ್ಡೆ ವಿರುದ್ದ ವಾಗ್ದಾಳಿ ನಡೆಸಿದರು. ಮೋದಿ ಅವರು ಇಂಥವರನ್ನ ಮಂತ್ರಿ ಮಂಡಲದಲ್ಲಿ ಇಟ್ಟುಕೊಂಡಿದ್ದಾರೆ‌. ರೈತರ ಸಮಸ್ಯೆ ತೆಗೆದುಕೊಂಡು ಮೋದಿ ಬಳಿ ಹೋದ್ರೆ ಅವರ ಬಳಿ ಉತ್ತರವಿಲ್ಲ. ನಾನು ಪಾಕ್ತಿಸ್ತಾನಕ್ಕೆ ಐದು ಬಾರಿ ಹೋಗಿದ್ದೆ‌, ಯಾರೂ ನನಗೆ ಹೊಡೆದಿಲ್ಲ. ಏಳಿ ಎದ್ದೇಳಿ ನಮಗೂ ಶಕ್ತಿ ಇದೆ, ಸಂವಿಧಾನ ಬದಲಾವಣೆಗೆ ಅವಕಾಶ ನೀಡೋದಿಲ್ಲ. ಮೋದಿ ಹೆಲಿಕಾಪ್ಟರ್ ನಲ್ಲಿ ಸಾಗಿಸಿದ ಬ್ಯಾಗ್ ತಪಾಸಣೆ ಮಾಡಿದ್ರೆ ಅಂತಹ ಅಧಿಕಾರಿ ಅಮಾನತ್ತು ಮಾಡಲಾಗತ್ತೆ, ಇದು ಪ್ರಜಾಪ್ರಭುತ್ವ ಎಂದು ಮೋದಿ ವಿರುದ್ಧ ವ್ಯಂಗ್ಯವಾಡಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv