‘ಮಾಟ ಮಂತ್ರ ನಮಗ್ಯಾರಿಗೂ ತಟ್ಟುವುದಿಲ್ಲ’: ಸಚಿವ ಹೆಚ್‌.ಡಿ.ರೇವಣ್ಣ

ಹಾಸನ: ನಮ್ಮ ಕುಲದೇವರು ಈಶ್ವರ, ಶೃಂಗೇರಿ ಶಾರದೆ ಆಶೀರ್ವಾದ ಇರೋವರೆಗೂ ನಮ್ಮ ಸರ್ಕಾರಕ್ಕೆ ಏನೂ ಆಗಲ್ಲ. ಮಾಟ ಮಂತ್ರ ಮಾಡಿದ್ರೂ ನಮಗ್ಯಾರಿಗೂ ತಟ್ಟುವುದಿಲ್ಲ. ವಾಮಚಾರ ಮಾಡಿಸಿದವರಿಗೇ ರಿವರ್ಸ್ ಆಗಲಿದೆ ಎಂದು ಹೆಚ್.​ಡಿ. ರೇವಣ್ಣ ಬಿ.ಎಸ್‌.ವೈಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಹಾಸನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ತಮ್ಮ ಅವಧಿಯಲ್ಲಿ ಹಾಸನಕ್ಕೆ ಏನು ಕಡಿದು ಕಟ್ಟೆ ಹಾಕಿದ್ದಾರೆ.  ಬಿಜೆಪಿ ಸರಕಾರ ಜಿಲ್ಲೆಗೆ ಏನು ಮಾಡಿವೆ ಎಂಬುದನ್ನು ಹೇಳಲಿ.?  ನನ್ನ ಕಡೆಯಿಂದ ಕಾಂಗ್ರೆಸ್ ನವರಿಗೆ ತೊಂದರೆ ಏನು ಆಗಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಸೇರಿ ಯಾವುದೇ ನಾಯಕರು ಕೇಳಿದ್ರೆ ಉತ್ತರ ಕೊಡಲು ನಾನು ಸಿದ್ಧ ಎಂದ್ರು. ನಾನು ಸಮ್ಮಿಶ್ರ ಸರಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ವರ್ಗಾವಣೆ ಸೇರಿ ಯಾವುದೇ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ನನ್ನ ಇಲಾಖೆಯ ಕೆಲಸವೇ ಬೇಕಾದಷ್ಟಿದೆ  ಎಂದು ಸಚಿವ ಹೆಚ್​ಡಿ ರೇವಣ್ಣ ಗುಡುಗಿದ್ರು.

ಬದುಕಿರುವವರೆಗೂ ನಾನು ಕುಮಾರಸ್ವಾಮಿ ಹೊಡೆದಾಡಲ್ಲ. ಸೋದರರು ಕಚ್ಚಾಡುತ್ತಾರೆ ಎಂದುಕೊಂಡಿದ್ರೆ ಅದು ಅವರ ಭ್ರಮೆ. ನಾನು ಸಿಎಂ ಖುರ್ಚಿಯ ಆಕಾಂಕ್ಷಿಯಲ್ಲ. ಸಮ್ಮಿಶ್ರ ಸರಕಾರ 5 ವರ್ಷ ಸುಭದ್ರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ನಡುವೆ ರಾಜಕೀಯ ಮೀರಿದ ಸಂಬಂಧವಿದೆ.  ಸಿದ್ದರಾಮಯ್ಯ ಮತ್ತು ಸಚಿವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ರು.