‘ಕುಮಾರಸ್ವಾಮಿ ಮಾನವೀಯತೆ ಇರೋ ಸಿಎಂ, ದಿನದ 24 ಗಂಟೆ ರಾಜ್ಯದ ಬಗ್ಗೆ ಚಿಂತೆ ಮಾಡ್ತಾರೆ’

ಹಾಸನ: ಸಿಎಂ ಕುಮಾರಸ್ವಾಮಿ ಮಾನವೀಯತೆ ಇರೋ ಮುಖ್ಯಮಂತ್ರಿ. ನನ್ನ ತಮ್ಮ ಅಂತ ಹೇಳುತ್ತಿಲ್ಲ, ದಿನದ 24 ಗಂಟೆ ರಾಜ್ಯದ ಬಗ್ಗೆ ಚಿಂತನೆ ಮಾಡುತ್ತಾರೆ. ರಾಜ್ಯ ಚುನಾವಣಾ ಆಯೋಗ ಬಿಜೆಪಿ ತಾಳಕ್ಕೆ ಕುಣಿಯಬಾರದು. ಒಮ್ಮೆ ನಾಮಪತ್ರ ಅಂಗೀಕಾರ ಆದ ಮೇಲೆ ಪ್ರಶ್ನೆ ಮಾಡಲು ಬರಲ್ಲ. ಆದರೂ ನನ್ನ ಪುತ್ರ ಸಲ್ಲಿಸಿರುವ ಅಫಿಡವಿಟ್​ ಅನ್ನ ಮರು ಪರಿಶೀಲನೆ ಮಾಡುವಂತೆ ಸೂಚಿಸಿ ಜಿಲ್ಲಾಧಿಕಾರಿಗೆ ಚುಣಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ ಎಂದು ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಾಸನ, ತುಮಕೂರಿಗೆ ಅವರ ಕೊಡುಗೆ ಏನು? ಕಳೆದ 5 ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟ ಕಾಣಿಕೆ ಏನು ಎಂದು ಸಚಿವ ರೇವಣ್ಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿ.ಬಿ.ಶಿವಪ್ಪ, ಹನುಮೇಗೌಡರನ್ನು‌ ಹಾಳು ಮಾಡಿದ್ದು ಮಂಜು.  ಹಿಂದು‌ ಮುಸ್ಲಿಂರನ್ನು ಹೊಡೆದಾಡಿಸುವುದೇ ಬಿಜೆಪಿಯವರ ಕೆಲಸ. ಕೆಲವು ವ್ಯಕ್ತಿಗಳು ಕುಮಾರಸ್ವಾಮಿ, ನಿಖಿಲ್ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ. ಇದರ ವಿರುದ್ಧ ಚುನಾವಣಾ ಆಯೋಗ ಬ್ರೇಕ್ ಹಕಬೇಕು ಎಂದು ಮನವಿ ಮಾಡಿದ್ರು.

ಇದೇ ವೇಳೆ ಈಶ್ವರಪ್ಪ ಮುಖ್ಯಮಂತ್ರಿಯನ್ನು ಸಾಯಿ ಅಂತಾನೆ. ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದ ಅವರು,
ರಾಜ್ಯದ ಹಣ ಲೂಟಿ ಹೊಡೆದು ಜೈಲಿಗೆ ಹೋದವರು ಕಮಲ ನಾಯಕರು ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv