ಮೋದಿ ಮತ್ತೆ ಪ್ರಧಾನಿ ಆದ್ರೆ ನಾನು ರಾಜಕೀಯ ಬಿಟ್ಟು ಹೋಗ್ತೀನಿ: ಹೆಚ್​.ಡಿ ರೇವಣ್ಣ

ಮೈಸೂರು: 6, 7,8 ನನಗೆ ಲಕ್ಕಿ ನಂಬರ್.  ಬೇಕಾದ್ರೆ ಡೈರಿಯಲ್ಲಿ ಬರೆದು ಇಟ್ಕೊಳಿ, ಮೋದಿ  ಮತ್ತೆ ಪ್ರಧಾನಿ ಆದ್ರೆ ನಾನು ರಾಜಕೀಯ ಬಿಟ್ಟು ಹೋಗ್ತೀನಿ. 18 ಲಕ್ಕಿ ನಂಬರ್ ಈ ಬಾರಿ ಮೊದಲ ಹಂತದ 14 ಅಭ್ಯರ್ಥಿಗಳು ನಾವೇ ಗೆಲ್ತೀವಿ ಎಂದು ಲೋಕೋಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ 6, 8, 22 ಅದೃಷ್ಟ ಸಂಖ್ಯೆಗಳೇ. 18 ಅಂದರೆ 1+8=9. 9 ಬಹಳ ಅದೃಷ್ಟ ಸಂಖ್ಯೆ. ಕಳೆದ ಬಾರಿ 2018 ಚುನಾವಣೆ ನಡೆಯಲಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಈ ಬಾರಿ ಕೂಡ 18 ರಂದು ಮತದಾನ ಇದೆ. ಹೀಗಾಗಿ ಮೊದಲ‌ ಹಂತದ 14 ಸ್ಥಾನ ಮೈತ್ರಿ ಅಭ್ಯರ್ಥಿ ಗೆಲ್ಲುತ್ತಾರೆ. ರಾಜ್ಯದಲ್ಲಿ ಅಚ್ಚರಿ ಫಲಿತಾಂಶ ಬರುತ್ತೆ. 22 ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬಿಜೆಪಿಯವರು ಎಷ್ಟೇ ಹೇಳಿದರೂ,  6, 8 ತಾರೀಖು ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದ್ರು ಎಂದು ಹೇಳಿದ್ರು.

ಇದೇ ವೇಳೆ ಅಂಬರೀಶ್ ಅವರ ಬಗ್ಗೆ ನಾನು ಮಾತನಾಡಲು ಹೋಗಲ್ಲ. ಅಂಬರೀಶ್ ಬಗ್ಗೆ ನನಗೆ ಗೌರವ ಇದೆ. ಕಳೆದ ಬಾರಿ ಅವರ ಮನೆಗೆ ಬಂದ ಟಿಕೆಟ್ ತಗೊಂಡಿಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬರುವ ಹೋಪ್ ಇರ್ಲಿಲ್ಲ ಎಂದು ಹೇಳಿದ್ರು.

ಕರ್ನಾಟಕ ರಾಜ್ಯದ ಪಿಡಬ್ಲೂ ಇಲಾಖೆ ಹಣ ಚುನಾವಣೆ ಬಳಕೆ ಆಗ್ತಿದೆ ಅನ್ನೋ ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅಂತಹ ಮನುಷ್ಯ ಅಲ್ಲ. ನಾನು ಹಾಗೇ ಬದುಕುವ ಅವಶ್ಯಕತೆಯಿಲ್ಲ. ನನ್ನ ಇಲಾಖೆಯ 5% ಹಣ ಉಳಿಕೆ ಮಾಡಿದ್ದೀನಿ. ಪಾಪ ಮಾಧ್ಯಮದವರು ನನ್ನ ಬಗ್ಗೆ‌ ಕಾಳಜಿ ವಹಿಸಿದ್ದೀರಿ. ಇಲ್ಲ ಅಂದ್ರೆ ನಾನು ಐದು ಬಾರಿ ಎಂಎಲ್ ಎ ಆಗ್ತಿರಲಿಲ್ಲ ಎಂದು ಹೇಳಿದ್ರು .


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv