‘ಸರ್ಕಾರ ಸುಭದ್ರವಾಗಿದೆ, ಏನೂ ಆಗಲ್ಲ’ : ಹೆಚ್​.ಡಿ ರೇವಣ್ಣ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸಚಿವ ಹೆಚ್​.ಡಿ.ರೇವಣ್ಣ ಭೇಟಿಯಾಗಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಉಂಟಾದ ಹೀನಾಯ ಸೋಲಿನ ಬಗ್ಗೆ ಮತ್ತು ರಾಜ್ಯ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯರನ್ನು ಹೆಚ್​.ಡಿ.ರೇವಣ್ಣ ಭೇಟಿಯಾದ್ರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ರೇವಣ್ಣ, ಲೋಕಸಭೆ ರಿಸಲ್ಟ್​ನಿಂದ ರಾಜ್ಯ ಮೈತ್ರಿ ಸರ್ಕಾರಕ್ಕೆ ಏನೂ ಪರಿಣಾಮ ಬೀರುವುದಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದ್ರು. ಇನ್ನು ಸಚಿವ ಪರಮೇಶ್ವರ್​ ಕೂಡ ಕುಮಾರಸ್ವಾಮಿಯೇ ಸಿಎಂ ಆಗಿರಬೇಕು ಎಂದಿದ್ದಾರೆ. ಅಲ್ಲದೇ ಇಂತಹ ಸಂದರ್ಭದಲ್ಲಿ ಯಾವುದೇ‌ ನಿರ್ಣಯ ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಯಾವುದೇ ತೊಂದರೆ ಆಗಲ್ಲ ಎಂದ್ರು. ಇನ್ನು ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ರೇವಣ್ಣ, ಹಾಸನ ದೇವೇಗೌಡ್ರು 60 ವರ್ಷ ಪ್ರತಿನಿಧಿಸಿದ್ದ ಕ್ಷೇತ್ರ. ಪಾಪ ಅವರು ದೊಡ್ಡವರು. ಇಂತಹ ಎಷ್ಟೋ ಚುನಾವಣೆಯನ್ನು ದೇವೇಗೌಡ್ರು ಎದುರಿಸಿದ್ದಾರೆ. ಈಗ ಅವರು ಸೋತಿದ್ದಾರೆ ಎಂಬುದು ನೋವಿನ ಸಂಗತಿ ಎಂದ್ರು. ತಾತ ಸೋತಿರುವುದರಿಂದ ಸಹಜವಾಗೇ ಪ್ರಜ್ವಲ್​ಗೆ ನೋವಾಗಿದೆ ಹೀಗಾಗಿ ತಾತನಿಗಾಗಿ ಕ್ಷೇತ್ರ ತ್ಯಾಗ ಮಾಡುವುದಾಗಿ ಹೇಳಿದ್ದಾರೆ ಎಂದ್ರು.