ಸಂಪುಟ ರಚನೆಯಲ್ಲಿ ಅಸಮಾಧಾನ ಸಹಜ, ಇದು ಹೊಸದಲ್ಲ :ಸಿಎಂ ಹೆಚ್​ಡಿಕೆ

ಬೆಂಗಳೂರು: ಪೂರ್ಣ ಪ್ರಮಾಣದ ಮಂತ್ರಿಮಂಡಲ ರಚನೆ ಮಾಡಲು ಸ್ವಲ್ಪ ತಡವಾಯಿತು. ಹೀಗಾಗಿ ಹಲವು ಟೀಕೆಗಳನ್ನು ಎದುರಿಸಬೇಕಾಯಿತು. ಹೊಸ ಸರ್ಕಾರ ರಚನೆ ಆದ್ಮೇಲೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ್ರೆ ಸಮಯವಕಾಶ ಬೇಕಾಗುತ್ತದೆ ಅಂತಾ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಮೊದಲ ಬಾರಿಗೆ ಸಂಪುಟ ಸಭೆ ನಡೆಸಿದರು. ಅದಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಹೊಸ ಸರ್ಕಾರ ರಚನೆಯಾದ್ಮೇಲೆ ಸಂಪುಟ ರಚನೆ ವಿಚಾರವಾಗಿ ಅಸಮಾಧಾನ ಆಗೋದು ಸಹಜ. ಇದು ಹೊಸದಲ್ಲ. 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಂಪುಟ ರಚನೆ ವಿಚಾರದಲ್ಲಿ ಏನೆಲ್ಲಾ ಘಟನೆಗಳು ನಡೆಯಿತು ಅನ್ನೊದರ ಬಗ್ಗೆ ನಾನು ಮರೆತಿಲ್ಲ. ಯಾವ್ಯಾವ ಭಾಗಗಳಲ್ಲಿ ಪ್ರತಿಭಟನೆ ನಡೀತು ಅನ್ನೋದು ಗೊತ್ತಿದೆ ಅಂತಾ ಬಿಜೆಪಿಗೆ ಟಾಂಗ್ ನೀಡಿದರು. ಮುಂದಿನ ದಿನಗಳಲ್ಲಿ ಉತ್ತಮವಾದ ಆಡಳಿತ ಕೊಡುವ ನಿಟ್ಟಿನಲ್ಲಿ ಇಂದು ಸಭೆ ನಡೆಸಿದ್ವಿ. ಕ್ಯಾಬಿನೆಟ್​ ಸೆಭೆಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಲಾಗಿದೆ. ಎರಡೂ ಪಕ್ಷದವರು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಚರ್ಚೆ ಮಾಡಲಾಯ್ತು ಅಂದರು.

ಎಲ್ಲರನ್ನೂ ಸಮಾಧಾನ ಮಾಡ್ತೇವೆ

ಇದೇ ವೇಳೆ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಶೀಘ್ರದಲ್ಲಿಯೇ ಖಾತೆ ಹಂಚಲಾಗುತ್ತದೆ. ಇಂದು ಸಂಜೆ ವೇಳೆಗೆ ಅಥವಾ ನಾಳೆ ಸಿಎಂ ಅವರು ಖಾತೆಯನ್ನು ಹಂಚಲಿದ್ದಾರೆ. ಸಚಿವ ಸ್ಥಾನ ವಿಚಾರದಲ್ಲಿ ಕೆಲವು ನಾಯಕರಿಗೆ ಅಸಮಾಧಾನ ಇರೋದು ನಿಜ. ಕಾಂಗ್ರೆಸ್​ನಿಂದ 79 ಶಾಸಕರಿದ್ದಾರೆ. ಅವರೆಲ್ಲರಿಗೂ ಮಂತ್ರಿ ಆಗುವ ಅರ್ಹತೆ ಇದೆ. ಆದ್ರೆ ಎಲ್ಲರಿಗೂ ಮಂತ್ರಿ ಸ್ಥಾನ ನೀಡಲು ಆಗಲ್ಲ. ಖಾತೆ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಯಾವ ಕಾರಣಕ್ಕೂ ಅನುಮಾನ ಬೇಡ. ನಾವು ಹಾಗೂ ಹೈಕಮಾಂಡ್‌ನಿಂದ ಅತೃಪ್ತರಿಗೆ  ಸಮಾಧಾನಪಡಿಸುವ ಕೆಲಸ ಮಾಡುತ್ತೇದವೆ. ಯಾವುದೇ ಗೊಂದಲ ಆಗಲು ಬಿಡಲ್ಲ. ಆರು ಸ್ಥಾನಗಳನ್ನು ಕಾಂಗ್ರೆಸ್​ ಪಕ್ಷದಿಂದ ಹಾಗೇ ಖಾಲಿ ಇಟ್ಟಿದ್ದೇವೆ. ಜೆಡಿಎಸ್​ನಿಂದ ಒಂದು ಸ್ಥಾನ ಖಾಲಿಯಿಟ್ಟಿದ್ದೇವೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv