ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿರುವ ರೈತರ ಸಾಲದ ಬಗ್ಗೆ ಮಾಹಿತಿನೇ ಇಲ್ವಂತೆ..!

ಬೆಂಗಳೂರು: ರೈತರ ಸಾಲ ಮನ್ನಾ ಸಂಬಂಧ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ‌ಮಾಡಿರುವ ಸಾಲದ ಒಟ್ಟು ಮೊತ್ತದ ಬಗ್ಗೆ ಮಾಹಿತಿ‌ ಕೇಳಿದ್ದೇನೆ. ಆದರೆ ಬ್ಯಾಂಕಿನವರು ಇದುವರೆಗೂ ಮಾಹಿತಿನೇ ಕೊಟ್ಟಿಲ್ಲ ಅಂತಾ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್​ಗಳು ಕೇಂದ್ರದ ಅಧೀನದಲ್ಲಿವೆ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ. ಸಾಲ ಪಡೆದಿರುವ ಬಗ್ಗೆ ಮಾಹಿತಿ ಪಡೆಯಲು ನಮ್ಮ ಅಧಿಕಾರಿಗಳ ಒಂದು ವಿಂಗ್ ಮಾಡಿದ್ದೇನೆ. ಎಲ್ಲಾ ದುಡ್ಡನ್ನು ನಾವೇ ಭರಿಸಿದ್ದೇವೆ. ಕೇಂದ್ರದಿಂದ ಒಂದು ಬಿಡುಗಾಸು ಪಡೆದಿಲ್ಲ. ಬ್ಯಾಂಕ್ ಅಧಿಕಾರಿಗಳು ಕನಿಷ್ಟ ಸಾಲದ ಬಗ್ಗೆಯಾದರೂ ಮಾಹಿತಿ ನೀಡಬೇಕು. ಬಿಜೆಪಿಗೆ ಸಾಲಮನ್ನಾಕ್ಕಾಗಿ ಕೇಂದ್ರದಿಂದ ಒಂದು ರುಪಾಯಿ ತರಲು ಆಗಿಲ್ಲ. ಕೊನೇಪಕ್ಷ ಅಪಪ್ರಚಾರ ಮಾಡೋದನ್ನಾದ್ರೂ ನಿಲ್ಲಿಸಲಿ ಅಂತಾ ಹೇಳಿದರು.

ನವೆಂಬರ್​ನಿಂದ ನಿಂದ ಹಂತ ಹಂತವಾಗಿ ಬ್ಯಾಂಕ್​ಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ 6500 ಕೋಟಿ ರೂಪಾಯಿ ರೆಡಿ ಇದೆ ಅಂತಾ ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv