ಕಾರ್ಯಕರ್ತರ ಒತ್ತಾಯದ ಮೇರೆಗೆ ಚನ್ನಪಟ್ಟಣದಲ್ಲಿ ಸ್ಪರ್ಧೆ: ಹೆಚ್​ಡಿಕೆ

ಮೈಸೂರು: ರಾಮನಗರ ನನ್ನ ಕರ್ಮ ಭೂಮಿ. ಅದಕ್ಕೆ ಅಲ್ಲೇ ಸ್ಪರ್ಧೆ ಮಾಡ್ತೀನಿ. ಕಾರ್ಯಕರ್ತರ ಒತ್ತಾಯದ ಮೇರೆಗೆ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡ್ತಿದ್ದೀನಿ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನನ್ನ ಕುಟುಂಬದಿಂದ ಇಬ್ಬರನ್ನು ಬಿಟ್ಟರೆ ಯಾರೂ ಸ್ಪರ್ಧಿಸೋಲ್ಲ. ಹಾಗಾಗಿ ಎರಡು ಕ್ಷೇತ್ರಗಳಲ್ಲಿ ನಾನೇ ಸ್ಪರ್ಧೆ ಮಾಡುತ್ತಿದ್ದೇನೆ. ಯಾವುದೇ ಕ್ಷೇತ್ರದ ವಿಚಾರದಲ್ಲಿ ನಾನು ಯಾವ ಪಕ್ಷದ ಜತೆಗೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ರು.
ಇದೇ ತಿಂಗಳು 14ರ ಮಧ್ಯಾಹ್ನದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 16ರವರೆಗೆ ಜಿ.ಟಿ. ದೇವೇಗೌಡರ ಜತೆ ಪ್ರಚಾರ ಮಾಡುತ್ತಿದ್ದೇನೆ. ಸಾಧ್ಯವಾದಷ್ಟು ಎಲ್ಲಾ ಗ್ರಾಮಗಳಿಗೆ ಭೇಟಿ ಕೊಟ್ಟು ಚುನಾವಣೆ ಪ್ರಚಾರ ಮಾಡ್ತೀನಿ. ನಮಗೆ ಸಿಕ್ಕಿರೋ ಬೆಂಬಲ ಎಂಥದ್ದು ಅಂತ ಕೂಡ ತೋರಿಸುತ್ತೇನೆ ಎಂದು ತಿಳಿಸಿದ್ರು.

ಚುನಾವಣಾ ಆಯೋಗ ಹಲ್ಲು ಕಿತ್ತ ಹಾವಿನಂತಾಗಿದೆ
ಮಾಜಿ ಸಚಿವ ಶ್ರೀನಿವಾಸ್​ ಪ್ರಸಾದ್ ಹೇಳಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ದುಡ್ಡುಕೊಟ್ಟು ಜನರನ್ನು ಕೊಂಡುಕೊಳ್ಳುತಿದ್ದಾರೆ ಅನ್ನೋದರಲ್ಲಿ ಅನುಮಾನವೇ ಬೇಡ. ರಾಜ್ಯದಲ್ಲಿರುವ ಚುನಾವಣೆ ಆಯೋಗ ಹಲ್ಲು ಕಿತ್ತ ಹಾವಿನಂತೆ ಕಾಣಿಸುತ್ತಿದೆ. ರಾಜ್ಯ ಚುನಾವಣಾ ಆಯೋಗ ಸಿದ್ದರಾಮಯ್ಯರ ಅಣತಿಯಂತೆ ವರ್ತಿಸುತ್ತಿದೆ. ಈ ಬಗ್ಗೆ ಕೇಂದ್ರ ಚುನಾವಾಣಾ ಆಯೋಗಕ್ಕೆ ದೂರು ಕೊಡಲು ತೀರ್ಮಾನಿಸಿದ್ದೇನೆ. ಕೆಂಪಯ್ಯ ಚುನಾವಣಾ ಆಯೋಗಕ್ಕೆ ಮೀರಿದ ಶಕ್ತಿ ಹೊಂದಿದ್ದಾರೆ. ಅವರಿಗೆ ಆ ಶಕ್ತಿ ನೀಡಲಾಗಿದೆ ಎಂದು ದೂರಿದ್ರು.
2006ರ ಉಪಚುನಾವಣೆಯಲ್ಲಿ ಸಿದ್ದರಾಮಯ್ಯನ ಜತೆ ಇದ್ದವರು ಈಗಿಲ್ಲ. ಅವರನ್ನು ಒಬ್ಬೊಬ್ಬರನ್ನಾಗಿಯೇ ಕತ್ತರಿಸಿಕೊಂಡು ಬಂದಿದ್ದಾರೆ. ಆಗ ಸಿದ್ದರಾಮಯ್ಯರ ಜತೆ ಇದ್ದ ಶ್ರೀನಿವಾಸ್ ಪ್ರಸಾದ್, ಅಂಬರೀಶ್, ಎಸ್.ಎಂ.ಕೃಷ್ಣ ಸೇರಿದಂತೆ ಯಾರೂ ಇಲ್ಲ. ಅವರ ದುರಹಂಕಾರದಿಂದ ಎಲ್ಲರನ್ನು ದೂರ ತಳ್ಳಿದ್ದಾರೆ ಎಂದು ಟೀಕಿಸಿದ್ರು.

Leave a Reply

Your email address will not be published. Required fields are marked *