ಮಾಜಿ ಸಿಎಂ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ಹೆಚ್​.ಡಿ ದೇವೇಗೌಡ

ಮಂಡ್ಯ: ಕಾವೇರಿ ಉಳಿಸಲು ನಾನಾ ಹೋರಾಟ ಮಾಡಿದ್ದೇನೆ. ನಾನು ಉಳಿಸಿದ ಕಾವೇರಿ ನೀರು ಮತ್ತೇ ಬೇಕು ಅಂತ ತಮಿಳುನಾಡು ಮತ್ತೆ ಸುಪ್ರಿಂ‌ನಲ್ಲಿ ಅರ್ಜಿ ಹಾಕಿದೆ. ಪ್ರತಿ ಹಂತದಲ್ಲಿ  ನಾನು ಹೋರಾಟ  ಮಾಡಿದ್ದೇನೆ. ನಾನು ಕಣ್ಣಲ್ಲಿ ನೀರು ಹಾಕಿ ಹೋರಾಟ ಮಾಡಿದ್ದನ್ನ ಆಗಿನ ಪ್ರಧಾನಿಗಳೇ ಮರುಗಿದ್ದರು. ಆದರೆ ಬಿಜೆಪಿ ಬೆಂಬಲ ಪಡೆದು ಮಾತಾಡ್ತಾರೆ ಅವರು, ನನಗೆ ತುಂಬಾ ನೋವಾಗುತ್ತೆ ಎಂದು ಜೆಡಿಎಸ್​ ವರಿಷ್ಠ ದೇವೇಗೌಡ ಅವರು ಹೇಳಿದ್ದಾರೆ

ನಾಗಮಂಗಲದಲ್ಲಿ ನಡೆಯುತ್ತಿರುವ ಜಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ-ನಾನೂ ಬಹಳ ವರ್ಷ ಒಟ್ಟಿಗೆ ಕೆಲಸ ಮಾಡಿದ್ದೇವೆ. ಕೆಲವೊಂದು ಕಾರಣಗಳಿಂದ ದೂರ ಆಗಿ, ಇವತ್ತು‌ ಒಂದೇ ವೇದಿಕೆಯಲ್ಲಿ ಬಂದಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯದಂತ ಜನಪ್ರಿಯ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ  ಹಾಡಿ ಹೊಗಳಿದ್ದಾರೆ.

ನಾಗಮಂಗಲ ಕ್ಷೇತ್ರದಲ್ಲಿ ರಾಜಕೀಯ ವ್ಯವಸ್ಥೆ ಸ್ವಲ್ಪ ಮಾರ್ಪಾಡಾಗಿದೆ. ನಮ್ಮ ಜೊತೆಯಲ್ಲೇ ಬೆಳೆದ ಮುಖಂಡರೊಬ್ಬರು ಬೇರೆ ಕಡೆ ಇದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಶಕ್ತಿ ತುಂಬುವಾಗ ಎಲ್ಲಾ ವರ್ಗದ ಜನ ಬೆಂಬಲಿಸಿದ್ದಾರೆ. ಅವರು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ತುಂಬಾ ಹೇಳಬಹುದು. ಯಾರು ಗೈರಾಗಿದ್ದಾರೋ ಅವರ ಬಗ್ಗೆ ಸಿದ್ದರಾಮಯ್ಯ ಮಾತಾಡ್ತಾರೆ. ಹಿಂದೆ ಬರಗಾಲದಲ್ಲಿ ಮೈಸೂರು ಮಹಾರಾಜರು ಅನ್ನ ಹಂಚಿದ್ದಾರೆ. ಆದರೆ ಈಗ ಬರಗಾಲ ತಾಳದೆ  ಜನರು ಬೆಂಗಳೂರು ಊಟಿ ಬಾಂಬೆಗೆ ತೆರಳಿ ವಾಸವಾಗಿದ್ದಾರೆ. ಇದನ್ನ ತಪ್ಪಿಸಲು ನನ್ನ ಹೋರಾಟ ತುಂಬಾ ಇದೆ ಎಂದು ಹೇಳಿದ್ರು.

ಇದೇ ವೇಳೆ ಕಾವೇರಿ ವಿವಾದಲ್ಲಿ ನಾನು ಉಪವಾಸ ಕುಳಿತೆ. ನನ್ನ ಹೋರಾಟಕ್ಕೆ‌ ಮಣಿದ ಪ್ರಧಾನಿ, ಅನಂತ್​ ಕುಮಾರ್ ಕಳಿಸಿ ಸಮಸ್ಯೆ ಬಗೆಹರಿಸಿದ್ರು. ಆದರೆ ಮಂಡ್ಯದಲ್ಲಿ ಆಡೋ ಆಟ ನೋಡಿ ತುಂಬಾ ನೋವಾಗಿದೆ. ಶಿವರಾಮೇಗೌಡಗಿಂದ ಹೆಚ್ಚಿನ ಅಂತರದಿಂದ ನಿಖಿಲ್ ಗೆಲ್ಲಿಸಬೇಕು. ಈ ಶರೀರ ಇರೋವರೆಗೂ‌ ನಿಮಗಾಗಿ ಹೋರಾಟ ಮಾಡ್ತೀನಿ, ನನಗೆ ಜಾತಿ ಇಲ್ಲ. ಮುಂದಿನ ನನ್ನ ಹೋರಾಟಕ್ಕೆ ಸ್ಫೂರ್ತಿ ನೀಡಿ. ಕುಮಾರಸ್ವಾಮಿ ಸಿಎಂ ಆಗಲು ಕಾಂಗ್ರೆಸ್ ಎಲ್ಲಾ ನಾಯಕರು ಕಾರಣ. ಮಂಡ್ಯದಂತ ಕೆಚ್ಚೆದೆಯ, ವೀರ ಭೂಮಿಯಲ್ಲಿ ನಾಟಕೀಯ ಅಭಿಮಾನಕ್ಕೆ ಅವಕಾಶ ನೀಡಬೇಡಿ. ನಿಖಿಲ್ ಕುಮಾರಸ್ವಾಮಿಯನ್ನ ಬೆಂಬಲಿಸಿ ಎಂದು ಮನವಿ ಮಾಡಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv