ತುಮಕೂರಿನಲ್ಲಿ ನಾನು‌ ನಿಂತಿದ್ದೇನೆ, ದೇವರ ಆಟ ನೋಡೋಣ ದೇವೇಗೌಡ ಹೇಳಿಕೆ

ಹಾಸನ: ಅನೇಕರು ನಮ್ಮ ವಂಶದ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಆದ್ರೆ ನಾವು ರೈತರ ಮಕ್ಕಳು, ದೈವದಲ್ಲಿ ನಂಬಿಕೆ ಇಟ್ಟು ಕೊಂಡಿದ್ದೇವೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ ಹೇಳಿದ್ದಾರೆ. ಹೊಳೆನರಸಿಪುರದಲ್ಲಿ ಮಾತನಾಡಿದ ಅವರು, ನಾನು ಹಾಗೂ ಪತ್ನಿ ಮೊಮ್ಮಗ ಪ್ರಜ್ವಲ್‌ಗೆ ಮತ ಹಾಕಿದ್ದೇವೆ. ಪುತ್ರ ರೇವಣ್ಣಗೆ 1994 ರಿಂದ ಮತ ಚಲಾಯಿಸಿದ್ದೇನೆ. ಇವತ್ತು ಮೊಮ್ಮಗನಿಗೆ ಓಟ್ ಹಾಕಿದ್ದೇನೆ. ಎಲ್ಲರ ಅಭಿಪ್ರಾಯ ಪಡೆದು ಪ್ರಜ್ವಲ್‌ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇವು. ಬಹುಶಃ ಯಾವುದೇ ಆತಂಕ ಇಲ್ಲದೆೇ ಪ್ರಜ್ವಲ್ ಜಯಶಾಲಿಯಾಗುತ್ತಾನೆ. ಮಂಡ್ಯದಲ್ಲೂ ನಿಖಿಲ್ ಗೆಲ್ತಾನೆ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ರು.

ತುಮಕೂರಿನಲ್ಲಿ ನಾನು‌ ನಿಂತಿದ್ದೇನೆ. ದೇವರ ಆಟ ನೋಡೋಣ. ಕಾಂಗ್ರೆಸ್ ಹಾಗೂ ನಾವು ಒಗ್ಗಟ್ಟಿನಿಂದ ಚುನಾವಣಾ ಎದುರಿಸಿದ್ದೇವೆ. ಮೊದಲ ಹಂತದ 14 ಕ್ಷೇತ್ರಗಳಲ್ಲಿ ನಾವು 10 ಸ್ಥಾನದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು. ರಾಜ್ಯ ಸಮ್ಮಿಶ್ರ ಸರಕಾರ ಶೇ.20ರಷ್ಟು ಸರಕಾರ ಎಂಬ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಫೇಲ್ ಹಗರಣದಲ್ಲಿ ₹ 3 ಸಾವಿರ ಕೋಟಿ ಹಗರಣ ನಡೆದಿದೆ ಎಂಬ ದೂರಿದೆ. ದೊಡ್ಡ ಸ್ಥಾನದಲ್ಲಿರುವವರು ಲಘುವಾಗಿ ಮಾತನಾಡೋದನ್ನು ಬಿಟ್ರೆ ಅವರಿಗೂ ಗೌರವ ಬರಲಿದೆ. 5 ವರ್ಷದಲ್ಲಿ 10 ಕೋಟಿ ಉದ್ಯೋಗಿ ಸೃಷ್ಟಿ ಭರವಸೆ ಏನಾಯ್ತು? ಬಹುಶಃ ಅತಂತ್ರದ ಲೋಕಸಭೆ ನಿರ್ಮಾಣವಾಗಬಹುದು. ಅಂತಿಮವಾಗಿ ಜಾತ್ಯಾತೀತ ಪಕ್ಷಗಳು ಅಧಿಕಾರ ಹಿಡಿಯಬಹುದು. ಮೇ 23ರ ನಂತರ ತಿಳಿಯಲಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಲು ನನ್ನ ಬೆಂಬಲವಿದೆ. ಬೇರೆಯವರನ್ನೂ ಒಟ್ಟು ಗೂಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೆಚ್‌ಡಿಡಿ ಹೇಳಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv