ಸಭೆ ವೇಳೆ ದೇವೇಗೌಡರಿಂದ ಮಗ ರೇವಣ್ಣಗೆ ಕ್ಲಾಸ್​…!

ಹಾಸನ: ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಕರೆದಿದ್ದ ಸಂಸದೀಯ ಸಭೆಯಲ್ಲಿ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದ ಲೋಕೋಪಯೋಗಿ ಇಲಾಖೆ ಸಚಿವ ಹೆಚ್​.ಡಿ ರೇವಣ್ಣಗೆ ಫುಲ್​ ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗ ಹಾಸನದಲ್ಲಿ ನಡೆದಿದೆ. ಗೌಡರು, ಪುತ್ರ ರೇವಣ್ಣ ಮತ್ತು ಅಧಿಕಾರಿಗಳನ್ನ ಏರುಧ್ವನಿಯಲ್ಲಿ ಗದರಿದರು. ಸಭೆಯಲ್ಲಿ ಭಾಗಿಯಾಗಿ ಹೊರ ಹೋಗುವಾಗ ಹಾಸನ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಜೊತೆ ರೇವಣ್ಣ ಜೋರಾಗಿಯೇ ಮಾತನಾಡುತ್ತಿದ್ದರು. ಆಗ ದೇವೇಗೌಡರು ಏಯ್ ಯಾರ್ರೀ ಅದು, ರೇವಣ್ಣ ಜೊತೆ ಮಾತನಾಡೋದಾದ್ರೆ ಪಕ್ಕಕ್ಕೆ ಹೋಗಿ, ರೇವಣ್ಣ ಮಾತನಾಡೋದಾದ್ರೆ ಇಲ್ಲಿಗೆ ಬರಲಿ, ಇಲ್ಲಾ ಹೊರಗೆ ಹೋಗಿ ಎಂದು ದೇವೇಗೌಡರು ಸೂಚ್ಯವಾಗಿ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv