ಹುಟ್ಟೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ 86 ನೇ ಹುಟ್ಟುಹಬ್ಬ ಆಚರಣೆ

ಹಾಸನ: ಮಾಜಿ ಪ್ರಧಾನಿ ದೇವೇಗೌಡರ 86 ನೇ ಹುಟ್ಟು ಹಬ್ಬ ಹಿನ್ನಲೆಯಲ್ಲಿ, ತವರೂರು ಹಾಸನದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು.
ನಗರದ ನೀರುವಾಗಿಲು ಆಂಜನೇಯ ದೇವಾಲಯದಲ್ಲಿ, ನೂರಾರು ಜೆಡಿಎಸ್ ಕಾರ್ಯಕರ್ತರು ವಿಶೇಷ ಪೂಜೆಯನ್ನು ಸಲ್ಲಿಸಿದ್ರು. ಗೌಡರ ಹುಟ್ಟು ಹಬ್ಬಕ್ಕೆ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚನೆಯಾಗದ ಹಿನ್ನಲೆಯಲ್ಲಿ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಮುಖದಲ್ಲಿ ಹೆಚ್ಚಿನ ಉತ್ಸಾಹ ಕಾಣಲಿಲ್ಲ. ಬೇಸರದಲ್ಲಿಯೇ ಹುಟ್ಟು ಹಬ್ಬ ಆಚರಿಸಿದ್ರು.