ಹೆಚ್‌.ಸಿ.ಮಹದೇವಪ್ಪ ಬೇರೆ ಪಕ್ಷಕ್ಕೆ ಹೋಗಲ್ವಂತೆ

ಮಂಡ್ಯ: ಹೆಚ್​.ಸಿ ಮಹದೇವಪ್ಪ ಬಿಜೆಪಿಗೆ ಸೇರ್ಪಡೆ ಹೋಗ ಪ್ರಶ್ನೆಯೇ ಇಲ್ಲ ಅಂತ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ. ಅವರು ಹೋದರೆ ಸುಡುಗಾಡಿಗೆ ಹೊಗಬೇಕು, ಬೇರೆ ಪಾರ್ಟಿಗೆ ಹೋಗುವ ಪ್ರಶ್ನೆಯೇ ಇಲ್ಲ ಅಂತ ಹಾಸ್ಯಚಟಾಕಿ ಹಾರಿಸಿದ್ದಾರೆ. ನಾವೆಲ್ಲಾ ಒಟ್ಟಿಗೆ ಇದ್ದೇವೆ, ನಮ್ಮ ಮಧ್ಯೆ ಯಾವುದೇ ಮುನಿಸಿಲ್ಲ, ಹೆಚ್​.ಸಿ. ಮಹದೇವಪ್ಪನವರು ಸಿದ್ದರಾಮಯ್ಯನವರ ಜೊತೆಯೂ ಚೆನ್ನಾಗಿದ್ದಾರೆ. ನಿನ್ನೆಯಷ್ಟೇ ಅವರ ಜೊತೆ ಮಾತಾಡಿದ್ದೇನೆ ಎಂದು ಹೇಳಿದ್ದಾರೆ.
‘ಸಿಎಂ ಹೆಚ್‌ಡಿಕೆ ಬಜೆಟ್‌ ಉತ್ತಮವಾಗಿದೆ’
ಇದೇ ವೇಳೆ ಮಾತಾಡಿದ ಇಬ್ರಾಹಿಂ, ಹೆಚ್​.ಡಿ. ಕುಮಾರಸ್ವಾಮಿಯವರ ಬಜೆಟ್​ ಉತ್ತಮವಾದಂತಹ ಪ್ರಯತ್ನ. ಕೇಂದ್ರದ ಅಸಹಕಾರದ ನಡುವೆಯೂ ಸಾಲಮನ್ನಾ ಮಾಡಿದ್ದಾರೆ. ಸಂಪೂರ್ಣ ಸಾಲ ಮನ್ನಾಗೂ ಪ್ರಯತ್ನ ಮಾಡಲಾಗ್ತಿದೆ. ಬಿಜೆಪಿಯವರು ಸಂಪೂರ್ಣ ಸಾಲ ಮನ್ನಾ ಮಾಡಿ ಅಂತಿದ್ದಾರೆ. ನನಗೆ ಅಂದಿದ್ರೆ ಮೊದಲು 15 ಲಕ್ಷ ಅಕೌಂಟ್​ಗೆ ಹಾಕಿ ಎಂದು ಹೇಳ್ತಿದ್ದೆ. ಪೆಟ್ರೋಲ್​ ಬೆಲೆ ಜಾಸ್ತಿ ಆಗಿದ್ದರೂ ಕೂಡ ಬಿಜೆಪಿಯವರು ಅಚ್ಚೇದಿನ್​ ಆಗಿದೆ ಅಂತಾರೆ ನಮಗೆ ಹಳೇ ದಿನಗಳನ್ನ ಕೊಟ್ರೆ ಸಾಕು.