ಇನ್ನೊಬ್ಬರ ತಲೆ ತೆಗೆಯುವ ಧೈರ್ಯವಿದ್ರೆ, ಪ್ರತಿಫಲವನ್ನು ಎದುರಿಸುವ ಧೈರ್ಯವನ್ನು ತೋರಿಸಿ

ದೆಹಲಿ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯ ತಲೆ ಕಡಿದರೆ 11 ಲಕ್ಷ ರೂಪಾಯಿ ಕೊಡುವುದಾಗಿ 2017 ರ ಏಪ್ರಿಲ್​ನಲ್ಲಿ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಅಧ್ಯಕ್ಷ ಯೋಗೇಶ್​ ವರ್ಷಣೆ ಹೇಳಿದ್ದರು. ಈ ಪ್ರಕರಣದಲ್ಲಿ ತಮ್ಮನ್ನು ವಿಚಾರಣೆಗೊಳಪಡಿಸುತ್ತಿರುವುದಕ್ಕೆ ತಡೆ ನೀಡಬೇಕು ಎನ್ನುವ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್​ನ ಚೀಫ್​ ಜಸ್ಟೀಸ್​ ರಂಜನ್​ ಗೋಗೊಯ್​ ನೇತೃತ್ವದ ತ್ರಿಸದಸ್ಯ ಪೀಠ, ನಿಮಗೆ ಯಾರಿಗಾದರೂ ಕಿರುಕುಳ ಕೊಡುವಷ್ಟು ಧೈರ್ಯ ಇದ್ದ ಮೇಲೆ, ಅದಕ್ಕೆ ಪ್ರತಿಯಾಗಿ ಎದುರಾಗುವ ಕಾನೂನು ಕ್ರಮಗಳನ್ನು ಎದುರಿಸುವ ಧೈರ್ಯವೂ ಇರಬೇಕು ಎಂದಿದೆ. ಅಲ್ಲದೇ ನೀವು ಸಂವಿಧಾನ ಬದ್ಧವಾದ ಸರ್ಕಾರವನ್ನು ಹೆದರಿಸುವ ಧೈರ್ಯ ತೋರುತ್ತೀರಿ, ಮತ್ತು ನಮ್ಮ ಸಹಾಯ ಕೋರಿ ಇಲ್ಲಿಗೆ ಬಂದು ನಿಂತಿದ್ದೀರಿ. ನಿಮ್ಮ ಅರ್ಜಿಯನ್ನು ತಿರಸ್ಕರಿಸುತ್ತಿದ್ದೇವೆ, ಇನ್ನು ಹೆಚ್ಚು ವಾದಕ್ಕೆ ನಿಂತು, ಇನ್ನಷ್ಟು ನಿಮ್ಮ ವಿರುದ್ಧ ಮಾತನಾಡುವಂತೆ ಮಾಡಬೇಡಿ ಎಂದು ಯೋಗೇಶ್​ ವಾದ ಮಂಡಿಸ್ತಿದ್ದ ವಕೀಲರಿಗೆ ಪೀಠ ಸೂಚಿಸಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv