ಹೆಚ್​.ಡಿ ರೇವಣ್ಣನ ಹಾಗೆ ನಾನು ರಣ ಹೇಡಿಯಲ್ಲ -ಎ. ಮಂಜು

ಹಾಸನ: ಸಚಿವ ರೇವಣ್ಣ ಹತಾಶರಾಗಿ, ಸೋಲಿನ ಭೀತಿಯಲ್ಲಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಪುತ್ರ ಪ್ರಜ್ವಲ್ ರೇವಣ್ಣ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ನಾನು‌ ದೂರು ಸಲ್ಲಿಸಿದ್ದೆ. ಆದ್ದರಿಂದ ಚುನಾವಣಾ ಆಯೋಗ ಡಿಸಿ ಅವರಿಗೆ ಪತ್ರ ಬರೆದಿದೆ. ಗುಜರಾತ್​ನಲ್ಲಿ ಇದೇ ರೀತಿ ತಪ್ಪು ಮಾಹಿತಿ ನೀಡಿ ಅನರ್ಹವಾದ ಉದಾಹರಣೆ ಇದೆ. ಚುನಾವಣೆ ಬಳಿಕ ನ್ಯಾಯಾಲಯದಲ್ಲಿ ನ್ಯಾಯ ಸಿಗೋ ವಿಶ್ವಾಸವಿದೆ ಎಂದು ಹಾಸನ  ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ಮಂಜು ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, 1991 ರಲ್ಲಿ ದೇವೇಗೌಡರು ನನ್ನ ಸಹಾಯದಿಂದ ಗೆದ್ದಾಗ ಮಂಜು ಏನಾಗಿದ್ದ ಅನ್ನೋನು ಗೊತ್ತಿರಲಿಲ್ಲವೇ?, ಮಂಜು ರೌಡಿ, ಅವನನ್ನು ಮನೆಗೆ ಕಳಿಸಲು ಜನ ತೀರ್ಮಾನ ಮಾಡಿದ್ದಾರೆ ಅಂತ ರೇವಣ್ಣ ದೂರಿದ್ದರು. ರಾಜ್ಯದ ಒಂದು ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ‌ ಕೇಸಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ. ಅವರ ರೀತಿ ನಾನು ರಣಹೇಡಿಯಲ್ಲ ಅಂತ ಮಂಜು ಹರಿಹಾಯ್ದರು.

ರೇವಣ್ಣ ಅವರಿಂದ ಎಷ್ಟು ಇಂಜಿನಿಯರ್ಸ್ ಸತ್ತಿದ್ದಾರೆ ಅಂತ ಹೇಳಲಿ. ಎಷ್ಟು ಮಹಿಳೆಯರಿಗೆ ತೊಂದರೆಯಾಗಿದೆ ಗೊತ್ತಾ?, ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ರೆ ನಾನೂ ಮಾತನಾಡಬೇಕಾಗುತ್ತೆ ಎಂದು ಏಕ ವಚನದಲ್ಲೇ ತರಾಟೆಗೆ ತೆಗೆದುಕೊಂಡ್ರು, ಇದೇ ವೇಳೆ  ರೇವಣ್ಣ ಆಸ್ತಿ ಸಂಪಾದನೆ ಬಗ್ಗೆ ಬಹಿರಂಗ ಚರ್ಚೆಗೆ  ಬರಲಿ ಎಂದು ಆಹ್ವಾನ ನೀಡಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv