ಮಳೆ ನಡುವೆಯೇ ಪ್ರಜ್ವಲ್ ರೇವಣ್ಣ ಅಬ್ಬರದ ಪ್ರಚಾರ

ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಮಳೆಯ ನಡುವೆಯೇ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅಬ್ಬರದ ಪ್ರಚಾರ ನಡೆಸಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಕಡೂರು ತಾಲ್ಲೂಕಿನ ಮರಡಿಹಳ್ಳಿಯಲ್ಲಿ ಮಳೆಯ ನಡುವೆಯೇ ಪ್ರಚಾರ ನಡೆಸಿದ್ದಾರೆ. ಈ ವೇಳೆ ಕಡೂರಿಗೆ ನೀರಾವರಿ ಯೋಜನೆ ತರುವುದಾಗಿ ಭರವಸೆ ನೀಡಿದ್ದಾರೆ. ಪಂಚಾಯ್ತಿ ಮಟ್ಟದಿಂದ ನಿಯೋಗ ತೆಗೆದುಕೊಂಡು ಹೋಗಿ ಕುಮಾರಣ್ಣರನ್ನ ಭೇಟಿ ಮಾಡೋಣ. ನೀರಾವರಿ ಯೋಜನೆಗೆ ಅನುದಾನ ತರಲು ಇಲ್ಲಿಂದಲೇ ಹೋರಾಟ ಆರಂಭಿಸೋಣ ಅಂತಾ ಭರವಸೆ ನೀಡಿದ್ರು. ಈ ವೇಳೆ ಪ್ರಜ್ವಲ್​ಗೆ ವೈಎಸ್​ವಿ ದತ್ತಾ, ಪರಿಷತ್ ಉಪ ಸಭಾಪತಿ ಧರ್ಮೇಗೌಡ ಸಾಥ್ ನೀಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv