ಸಿಡಿಲು ಬಡಿದು ರೈತ, ಎತ್ತು ಸಾವು

ಹಾಸನ: ಸಿಡಿಲು ಬಡಿದು ರೈತ ಮತ್ತು ಎತ್ತು ಸಾವನ್ನಪ್ಪಿದ ಘಟನೆ ಅರಸೀಕೆರೆ ತಾಲೂಕಿನ ತಳಲೂರು ಗ್ರಾಮದಲ್ಲಿ ನಡೆದಿದೆ. ಹುಚ್ಚಪ್ಪ(46) ಮೃತ ರೈತ. ಜೋರಾಗಿ ಮಳೆ ಬರುತ್ತಿದ್ದರಿಂದ ರೈತ ಮರದಡಿ ಆಶ್ರಯ ಪಡೆದಿದ್ದ ಜೊತೆಗೆ ಒಂದು ಎತ್ತು ಕೂಡ ಇತ್ತು. ಈ ವೇಳೆ ಸಿಡಿಲು ಬಡಿದು ರೈತ ಹಾಗೂ ಎತ್ತು ಸಾವನ್ನಪ್ಪಿದ್ದಾರೆ.