ಹಾಸನ-ಮಂಗಳೂರು ನಡುವೆ ಮೂರು ಕಡೆ‌ ಭೂ ಕುಸಿತ: ರೈಲು ಸಂಚಾರ ಸ್ಥಗಿತ.!

ಹಾಸನ: ಸಕಲೇಶಪುರ ತಾಲೂಕಿನಲ್ಲಿ ಭಾರೀ ಮಳೆ‌ಯಾಗುತ್ತಿದ್ದು, ಹಾಸನ-ಮಂಗಳೂರು ನಡುವೆ ಮೂರು ಕಡೆ‌ ಭೂ ಕುಸಿತ ಉಂಟಾದ ಘಟನೆ ಯಡಕುಮರಿ ಮೈಲು 218 ರಲ್ಲಿ ನಡೆದಿದೆ.

ಈ ಸಂಬಂಧ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದ್ದು, ಬೆಂಗಳೂರಿಂದ ಮಂಗಳೂರಿಗೆ ಹೋಗುತ್ತಿದ್ದ ರೈಲು ಹಾಸನದಲ್ಲಿ ಸ್ಥಗಿತಗೊಂಡಿದೆ. ಇದರಿಂದ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುವಂತಾಗಿದೆ. ಹಾಸನದಿಂದ ಬದಲಿಯಾಗಿ ಕೆಎಸ್​ಆರ್​ಟಿಸಿ ಬಸ್​ಗಳ ಮೂಲಕ ಹೋಗಲು ವ್ಯವಸ್ಥೆ ಕಲ್ಪಿಸಲಾಗಿದ್ದು, 1200 ಪ್ರಯಾಣಿಕರಿಗೂ ರೈಲ್ವೆ ಅಧಿಕಾರಿಗಳು ಟಿಕೆಟ್ ದರವನ್ನು ಮರುಪಾವತಿ ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv