ಮರ್ಯಾದೆ ನೆಪದಲ್ಲಿ ಸಹೋದರಿ ಹತ್ಯೆಗೈದ ಅಣ್ಣನಿಗೆ ಮರಣದಂಡನೆ

ಹರಿಯಾಣ​​: ಅನ್ಯ ಸಮುದಾಯದವನನ್ನ ಪ್ರೀತಿಸಿ ವಿವಾಹಗಿದ್ದಾಳೆ ಎಂಬ ಕಾರಣಕ್ಕೆ ಸಹೋದರಿಯನ್ನೇ ಕೊಲೆ ಮಾಡಿದ್ದ 26 ವರ್ಷದ ವ್ಯಕ್ತಿಗೆ ಹಿಸಾರ್​ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಕಿರಣ್​ 2015ರಲ್ಲಿ ಸಿಸ್ವಾಲ್​ ಗ್ರಾಮದ ರೋಹ್ತಾಸ್​ನನ್ನ ಪ್ರೀತಿಸಿ ಮದುವೆಯಾಗಿದ್ರು. ರೊಹ್ತಾಸ್​ ಬೇರೆ ಸಮುದಾಯಕ್ಕೆ ಸೇರಿದವನಾಗಿದ್ದ ಕಾರಣ ಇವರ ವಿವಾಹಕ್ಕೆ ಕುಟುಂಬದ ವಿರೋಧವಿತ್ತು. ಫೆಬ್ರವರಿ 9,2017 ರಂದು ಜುಗ್ಲಾನ್​ ಗ್ರಾಮದಲ್ಲಿ ಕಿರಣ್​ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದಳು. ಬಳಿಕ ಆಕೆಯ ಕುಟುಂಬದವರೆ ಸಮಾಧಿ ಮಾಡಿದ್ರು. ಕಿರಣ್​ ಕೊಲೆಯಾಗಿದೆ ಅಂತ ಆರೋಪಿಸಿ ಆಕೆಯ ವಿವಾಹವನ್ನು ನೋಂದಣಿ ಮಾಡಿದ್ದ ವ್ಯಕ್ತಿ ದೂರು ದಾಖಲಿಸಿದ್ರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ಅಶೋಕ್​ನನ್ನ ಬಂಧಿಸಿ, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.