ದೊಗ್ಗಳ್ಳಿ ಟ್ರೇಡರ್ಸ್ ಹಾರ್ಡ್​​ವೇರ್ ಶಾಪ್​​ನಲ್ಲಿ ಅಗ್ನಿ ಅವಘಡ..!

ದಾವಣಗೆರೆ: ನಗರ ಮಂಡಿಪೇಟೆಯ ಬಿನ್ನಿ ಕಂಪನಿ ರಸ್ತೆಯಲ್ಲಿರುವ ಹಾರ್ಡ್​​ವೇರ್​​ ಶಾಪ್​ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ದೊಗ್ಗಳ್ಳಿ ಟ್ರೇಡರ್ಸ್ ಎಂಬ ಹೆಸರಿನ ಹಾರ್ಡ್​​ವೇರ್ ಶಾಪ್​​ನಲ್ಲಿ ಬೆಂಕಿಯಿಂದ ಹೊತ್ತಿ ಉರಿಯುತ್ತಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಹಾರ್ಡ್​ವೇರ್ ​ಶಾಪ್​ನಿಂದ ದಟ್ಟ ಹೊಗೆ ಹೊರಗೆ ಹೋಗುತ್ತಿದ್ದು, ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದೆ. ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಬಸವನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.