ಸಮಾವೇಶದಲ್ಲಿ ಹಾರ್ದಿಕ್ ಪಾಟೇಲ್​​ಗೆ ಕಪಾಳಮೋಕ್ಷ, ದೂರು ದಾಖಲು

ಗುಜರಾತ್: ರಾಜ್ಯದ ಸ್ಟಾರ್ ಕ್ಯಾಂಪೇನರ್ ಮತ್ತು ಕಾಂಗ್ರೆಸ್​ ನಾಯಕ ಹಾರ್ದಿಕ್ ಪಾಟೇಲ್​ಗೆ ಭಾಷಣ ಮಾಡುತ್ತಿದ್ದ ವೇಳೆ ಕಪಾಳಕ್ಕೆ ಬಾರಿಸಿದ ಪ್ರಸಂಗ ನಡೆದಿದೆ. ಹಾರ್ದಿಕ್ ಪಟೇಲ್, ಸುರೇಂದ್ರನಗರ ಜಿಲ್ಲೆ ಸೌರಾಷ್ಟ್ರ ಪ್ರಾಂತ್ಯದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ವೇದಿಕೆಗೆ ಬಂದ ವ್ಯಕ್ತಿಯೋರ್ವ ಕಪಾಳ ಮೋಕ್ಷ  ಮಾಡಿದ್ದಾನೆ. ನಂತರ ಅಲ್ಲಿದ್ದ ಕಾಂಗ್ರೆಸ್ ಮುಖಂಡರು ತಪ್ಪಿಸಲು ಬಂದಿದ್ದಾರೆ. ನಂತ್ರ ಹಾರ್ದಿಕ್​ ಪಾಟೇಲ್​ಗೆ ಹೊಡೆದ ವ್ಯಕ್ತಿಗೂ ಅಲ್ಲಿದ್ದ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಇನ್ನು, ಪ್ರಕರಣ ಸಂಬಂಧ ಹಾರ್ದಿಕ್​ ಪಾಟೇಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತ ಆಸ್ಪತ್ರೆಯಲ್ಲಿ ಚೇತರಿಸಿಕೊಂಡು ಮತನಾಡಿದ ವ್ಯಕ್ತಿ, ಈ ಹಿಂದೆ ಪಾಟೀದಾರ್​ ಮೀಸಲಾತಿಗಾಗಿ ಹಾರ್ದಿಕ್ ಪಾಟೇಲ್ ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ನನ್ನ ಪತ್ನಿ ಗರ್ಭಿಣಿ ಇದ್ದಳು. ಆಸ್ಪತ್ರೆಗೆ ಆಕೆಯನ್ನ ಕರೆದುಕೊಂಡು ಹೋಗುವಾಗ ಪ್ರತಿಭಟನೆಯಿಂದಾಗಿ ಹಲವು ಸಮಸ್ಯೆಗಳು ನನಗೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ಅವರಿಗೆ ಹೊಡೆಯಬೇಕು ಅಂತಾ ನಿರ್ಧಾರ ಮಾಡಿದ್ದೆ. ಇಂದು ನಾನು ಅವರಿಗೆ ಪಾಠ ಕಲಿಸಲು ಮುಂದಾಗಿದ್ದೆ ಅಂತಾ ಹೇಳಿದ್ದಾರೆ.  


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv