ವಿವಾದಾತ್ಮಕ ಹೇಳಿಕೆಗೆ ರಾಹುಲ್​- ಹಾರ್ದಿಕ್​ ಪಾಂಡ್ಯಾಗೆ ತಲಾ ₹20 ಲಕ್ಷ ದಂಡ..!

ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದ, ಟೀಂ ಇಂಡಿಯಾ ಆಟಗಾರರಾದ ಕೆ.ಎಲ್ ರಾಹುಲ್-ಹಾರ್ದಿಕ್ ಪಾಂಡ್ಯಾಗೆ ಸುಪ್ರಿಂಕೋರ್ಟ್​ ತಲಾ 20ಲಕ್ಷ ರೂ.ದಂಡ ವಿಧಿಸಿದೆ.ಪ್ರಕರಣದ ತನಿಖೆ ನಡೆಸಿದ ಬಿಸಿಸಿಐನ ಸುಪ್ರಿಂ ಕೋರ್ಟ್​ ನೇಮಿತ ತನಿಖಾಧಿಕಾರಿ ಡಿಕೆ ಜೈನ್, ನಿಯಮ 41(1)ಸಿ ಉಲ್ಲಂಘಿಸಿದ್ದಿಂದ ಈ ಶಿಕ್ಷೆ ವಿಧಿಸಿದ್ದಾರೆ.ಈ ಇಬ್ಬರಿಗೆ 20 ಲಕ್ಷದಲ್ಲಿ 10 ಲಕ್ಷವನ್ನ ಪ್ಯಾರಾ ಮಿಲಿಟರಿ ಫೋರ್ಸ್​ನ, 10 ಮೃತ ಸೈನಿಕರ ಪತ್ನಿಯರಿಗೆ ತಲಾ 1 ಲಕ್ಷ ಹಾಗೂ ಅಂಧರ ಕ್ರಿಕೆಟ್​ ಸಂಸ್ಥೆಗೆ 10 ಲಕ್ಷ ನೀಡುವಂತೆ ಸೂಚಿಸಿದ್ದಾರೆ. ನಾಲ್ಕು ವಾರದೊಳಗೆ ಈ ದಂಡ ಮೊತ್ತವನ್ನ ಪಾವತಿಸುವಂತೆ ಆದೇಶಿಸಿದ್ದಾರೆ.ಒಂದು ವೇಳೆ ನಾಲ್ಕು ವಾರದೊಳಗೆ ದಂಡ ಪಾವತಿಸದಿದ್ದಲ್ಲಿ ಪಂದ್ಯದ ಸಂಭಾವನೆಯಲ್ಲಿ ಕಡಿತಗೊಳಿಸುವಂತೆ ಬಸಿಸಿಐಗೆ ಸೂಚಿಸಿದೆ.ಕಳೆದ ಜನವರಿಯಲ್ಲಿ ಬಾಲಿವುಡ್ ಡೈರೆಕ್ಟರ್ ಕರಣ್ ಜೋಹಾರ್ ನಡೆಸಿಕೊಡುವ ಟಾಕ್​ ಶೋನಲ್ಲಿ ಈ ಆಟಗಾರರು ಕಾಣಿಸಿಕೊಂಡಿದ್ರು. ಈ ಶೋನಲ್ಲಿ ಕರಣ್ ಜೋಹಾರ್​ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಇವರಿಬ್ಬರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದ್ದವು.ಅದರಲ್ಲೂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪಾಂಡ್ಯಾ ಸಾಕಷ್ಟು ಟೀಕೆಗೊಳಗಾಗಿದ್ರು.ಇದೇ ಕಾರಣದಿಂದ ಬಿಸಿಸಿಐ ಇವರಿಬ್ಬಿಗೆ ಟೀಂ ಇಂಡಿಯಾದಿಂದ ಕೆಲ ಕಾಲ ನಿಷೇಧದ ಶಿಕ್ಷೆ ವಿಧಿಸಿತ್ತು.ಈ ಪ್ರಕರಣದಿಂದಾಗಿ ರಾಹುಲ್ ಹಾಗು ಹಾರ್ದಿಕ್ ವಿಶ್ವಕಪ್ ಟೂರ್ನಿ ಆಡೋದು ಅನುಮಾನವಾಗಿತ್ತು.ಆದ್ರೆ ಈಗ ಈ ದಂಡ ವಿಧಿಸಿರುವುದರಿಂದ ವಿಶ್ವಕಪ್ ನಿಷೇಧದಿಂದ ಪಾರಾಗಿದ್ದಾರೆ.