ಧೋನಿ ಕುರಿತ ಹಾರ್ದಿಕ್ ಟ್ವಿಟ್​ಗೆ ಫ್ಯಾನ್ಸ್​ ಫಿದಾ..!

ಕ್ರಿಕೆಟಿಗರು ಮೈದಾನದಲ್ಲಿ ಪರಸ್ಪರ ಎದುರಾಳಿಯಾಗಿ ಹೋರಾಡುತ್ತಾರೆ ನಿಜ.ಆದ್ರೆ ಮ್ಯಾಚ್ ಮುಗಿದ ಮೇಲೆ ಸೋಲು ಗೆಲುವನ್ನು ಬದಿಗಿಟ್ಟು ಎಂದಿಗೂ ತಮ್ಮ ಸ್ನೇಹ ಅಜರಾಮರ ಎನ್ನೋದನ್ನು ಸಾರುತ್ತಾರೆ. ಹೀಗೆ ಹೇಳ್ತಿರೋದಕ್ಕೆ ಕಾರಣ ಮುಂಬೈ ಇಂಡಿಯನ್ಸ್​ ಆಟಗಾರ ಹಾರ್ದಿಕ್ ಪಾಂಡ್ಯ ಮಾಡಿರುವ ಟ್ವೀಟ್. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ ಮೊದಲನೇ ಕ್ವಾಲಿಫೈಯರ್ ಪಂದ್ಯದ ನಂತರ ಹಾರ್ದಿಕ್ ಪಾಂಡ್ಯ ಹಾಗೂ ಸಿಎಸ್​ಕೆ ಕ್ಯಾಪ್ಟನ್ ಧೋನಿ​ ಪರಸ್ಪರ ಮಾತಾಡುತ್ತಾ ಕೆಲ ಸಮಯ ಕಳೆದಿದ್ದಾರೆ.ಈ ಫೋಟೊವನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದ ಹಾರ್ದಿಕ್​, ಧೋನಿ ನನಗೆ ಸ್ಫೂರ್ತಿ, ನನ್ನ ಫ್ರೆಂಡ್​, ನನ್ನ ಸಹೋದರ ಹಾಗೂ ನನ್ನ ಲೆಜೆಂಡ್​ ಅಂತಾ ಬರೆದುಕೊಂಡಿದ್ದರು.ಮೇ 7ರಂದು ಹಾರ್ದಿಕ್ ಮಾಡಿದ್ದ ಈ ಟ್ವೀಟ್​ ಇದುವರೆಗೂ 16 ಸಾವಿರಕ್ಕೂ ಹೆಚ್ಚು ರಿಟ್ವೀಟ್ಸ್​ ಕಂಡಿದೆ. ಜೊತೆಗೆ ಇದು ಈ ವರ್ಷದ ಐಪಿಎಲ್​ನ ಬೆಸ್ಟ್​ ಟ್ವೀಟ್ ಅಂತಾನೂ ನೆಟಿಜನ್ಸ್​  ಹೇಳುತ್ತಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv