ದಿ ಗ್ರೇಟ್​ ಖಲಿಗೇ ಸೆಡ್ಡು ಹೊಡೆದ ಭಜ್ಜಿ..!

ಹರ್ಭಜನ್​ ಸಿಂಗ್​ ಭಾರತ ಕಂಡ ಸಕ್ಸಸ್​ಫುಲ್​ ಆಫ್​​ಸ್ಪಿನ್ನರ್​​ಗಳಲ್ಲಿ ಒಬ್ಬರು. ಇತ್ತೀಚೆಗಷ್ಟೇ ಕೊನೆಗೊಂಡ ಐಪಿಎಲ್​​ನಲ್ಲಿ ಸಾಕಷ್ಟು ಯಂಗ್​ ಪ್ಲೇಯರ್​ಗಳ ದರ್ಬಾರ್ ಮಧ್ಯೆಯೂ ಹರಾಜಾಗಿದ್ದ 37 ವರ್ಷದ ಭಜ್ಜಿ ಎಲ್ಲರಲ್ಲಿ ಬೆರಗು ಮೂಡಿಸಿದ್ದರು. ಅಂದ್ರೆ, ಭಜ್ಜಿ ಅವರ ಎನರ್ಜಿ ಇನ್ನೂ ಇದೆ ಅನ್ನೋದನ್ನ ಅವರು ಪ್ರೂವ್ ಮಾಡಿದ್ದರು.

 

ಇದೀಗ ಆಫ್​​ ದಿ ಫೀಲ್ಡ್​​ನಲ್ಲೂ ಭಜ್ಜಿ ಪವರ್​ ಪ್ರದರ್ಶನ ಮುಂದುವರಿದಿದೆ. ಅದೂ ಯಾರೊಟ್ಟಿಗೆ ಗೊತ್ತಾ..? ಡಬ್ಲ್ಯೂ ಡಬ್ಲ್ಯೂ ಇ ಸ್ಟಾರ್​ ದಿ ಗ್ರೇಟ್​ ಖಲಿ ಅವರೊಟ್ಟಿಗೆ ಶಕ್ತಿ ಪ್ರದರ್ಶನಕ್ಕೆ ಹರ್ಭಜನ್​ ಮುಂದಾಗಿದ್ದಾರೆ.

ಹರ್ಭಜನ್​ ಸಿಂಗ್​ ಇತ್ತೀಚೆಗಷ್ಟೇ ಖಲಿ ಅವರನ್ನ ಭೇಟಿಯಾಗಿದ್ದು, ಈ ಇಬ್ಬರು ಒಂದು ಚಿಕ್ಕ ಕುಸ್ತಿ ಪಂದ್ಯವನ್ನಾಡಿದ್ದಾರೆ. ಅದು ತೊಡೆ ತಟ್ಟಿ ನಿಲ್ಲುವ ರೆಸ್ಲಿಂಗ್ ಅಲ್ಲ, ಭುಜಬಲದ ಪರಾಕ್ರಮ ತೋರುವ ಆರ್ಮ್​​ ರೆಸ್ಲಿಂಗ್​​ ಪಂದ್ಯ. ಈ ವಿಡಿಯೋವನ್ನ ತಮ್ಮ ಟ್ವಿಟರ್​​ನಲ್ಲಿ ಪೋಸ್ಟ್​ ಮಾಡಿರುವ ಭಜ್ಜಿ, ಪಂಜಾ ವಿತ್​ ಗ್ರೇಟ್​ ಖಲಿ ಅಂತ ಬರೆದುಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv