ಕಾಲಿನ‌ ಮೇಲೆ ಬಸ್ ಹರಿದು ಗಾಯಗೊಂಡಿದ್ದ ವಿಕಲಚೇತನ ಸಾವು

ದಾವಣಗೆರೆ: ಬಸ್​​ ಚಾಲಕನ ಅಜಾಗರೂಕತೆಯಿಂದ ಅಪಘಾತಕ್ಕೀಡಾಗಿದ್ದ ವಿಕಲಚೇತನ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ತಿಮ್ಮೆನಹಳ್ಳಿಯ ಪ್ರಸನ್ನ(28) ಮೃತ ವ್ಯಕ್ತಿ. ನಿನ್ನೆ ದಾವಣಗೆರೆ ಮಹಾನಗರ ಪಾಲಿಕೆ ಮುಂಭಾಗ ಪ್ರಸನ್ನ ಅವರು ಬಸ್ ಹತ್ತುತ್ತಿದ್ದಾಗ ಏಕಾಏಕಿ ಚಾಲಕ ಬಸ್ ಮುಂದಕ್ಕೆ ಚಲಾಯಿಸಿದ್ದ. ಇದರಿಂದ ಪ್ರಸನ್ನ ಅವರ ಕಾಲಿನ ಮೇಲೆ ಬಸ್ ಚಕ್ರ ಹರಿದು ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಆಂಬುಲೆನ್ಸ್ ನವರಿಗೆ ಫೋನ್​ ಮಾಡಿದರೂ ಅವರು ಸ್ಥಳಕ್ಕೆ ಬರಲಿಲ್ಲ ಎನ್ನಲಾಗಿದೆ. ನಗರದ ಮಧ್ಯ ಭಾಗದಲ್ಲಿದ್ದರು ಆಂಬುಲೆನ್ಸ್ ಬೇಗ ಬಾರದ ಕಾರಣ ನಡು ರಸ್ತೆಯಲ್ಲಿಯೇ ಗಾಯಾಳು ಪ್ರಸನ್ನ ನರಳಾಡಿದ್ದರು.
ಬಳಿಕ ಪ್ರಸನ್ನ ಅವರನ್ನ ಸಾರ್ವಜನಿಕರು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ತಡರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸನ್ನ ಸಾವನ್ನಪ್ಪಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv