ವ್ಹೀಲ್ ಚೇರ್​ನಲ್ಲಿ ಬಂದು ವೋಟ್ ಮಾಡಿದ ವಿಕಲಚೇತನ ಮಹಿಳೆ

ಬಾಗಲಕೋಟೆ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಬೆಳ್ಳಂಬೆಳಗ್ಗೆಯೇ ಮತದಾರ ಸರದಿ ಸಾಲಿನಲ್ಲಿ ನಿಂತು ವೋಟ್​ ಹಾಕುತ್ತಿದ್ದಾನೆ. ಅದ್ರಂತೆ ನಗರದಲ್ಲಿ ಮತದಾನ ಆರಂಭವಾಗುತ್ತಿದ್ದಂತೆ ವಿಕಲ ಚೇತನ ಮಹಿಳೆಯೊಬ್ಬರು ವ್ಹೀಲ್ ಚೇರ್​​ನಲ್ಲಿ ಬಂದು ಮತದಾನ ಮಾಡಿದರು. ಮತಗಟ್ಟೆ ಸಂಖ್ಯೆ 138ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿ ಮತದಾನದ ಮಹತ್ವ ಸಾರಿದರು. ಇನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv