12 ಗ್ರಾಂ ಚಿನ್ನದಲ್ಲಿ ಅರಳಿತು ಹಂಪಿ ರಥ..!

ಕಾರವಾರ: ಸಮೀಪದ ಕಡವಾಡ ಗ್ರಾಮದ ಅಕ್ಕಸಾಲಿಗ ಮಿಲಿಂದ್‌ ಉದಯ್‌­ಕಾಂತ್‌ ಅಣ್ವೇಕರ್ ಅವರು  12 ಗ್ರಾಂ ಚಿನ್ನ ಬಳಸಿ ಹಂಪಿಯ ಕಲ್ಲಿನ ರಥದ ಮಾದರಿಯನ್ನು ತಯಾರಿಸಿ ಗಮನಸೆಳೆದಿದ್ದಾರೆ.
1 ಇಂಚು ಎತ್ತರ ಹಾಗೂ 1.5 ಇಂಚು ಉದ್ದದ ಚಿನ್ನದ ರಥ ಇದಾಗಿದ್ದು, ನೋಡುಗರ ಮನಸೂರೆಗೊಳಿಸಿದೆ. ಕಳೆದ ವರ್ಷ 8 ಗ್ರಾಂ ಉಂಗುರದಲ್ಲಿ ತಾಜಮಹಲ್ ರಚನೆ ಮಾಡಿ ಇವರು ಗಮನ ಸೆಳೆದಿದ್ದರು. ಅಲ್ಲದೇ 2013ರಲ್ಲಿ 0.970 ಮಿಲಿ ಗ್ರಾಂ.ನಿಂದ 20 ಅಂಗುಲ ಉದ್ದದ ಸರವನ್ನು ತಯಾರಿಸಿ ಮಿಲಿಂದ್‌ ಲಿಮ್ಕಾ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ಬರೆದಿದ್ದರು. ಚಿನ್ನದಿಂದ ವಿವಿಧ ಕಲಾಕೃತಿ ರಚಿಸುವ ಹವ್ಯಾಸವನ್ನು ರೂಡಿಸಿಕೊಂಡಿರುವ ಮಿಲಿಂದ್ ಪ್ರತಿ ವರ್ಷ ವಿಶೇಷವಾದ ಕಲಾಕೃತಿ ರಚನೆ ಮಾಡುತ್ತಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv