ರಾಹುಲ್ ಸಂವಾದಕ್ಕೆ ಹೆಚ್​ಎಎಲ್ ಅನುಮತಿ ನಿರಾಕರಣೆ!

ಬೆಂಗಳೂರು: ಅಕ್ಟೋಬರ್ 13 ರಂದು ರಾಜ್ಯಕ್ಕೆ ಆಗಮಿಸಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೆಚ್​ಎಎಲ್​ ನೌಕರರ ಜೊತೆ ವಿಶೇಷ ಸಂವಾದ ನಡೆಸಲು ನಿರ್ಧರಿಸಿದ್ದರು. ರಫೇಲ್​ ಡೀಲ್​ ಕುರಿತಾಗಿ ವಿವಾದ ಎದ್ದಿರೋ ಹಿನ್ನೆಲೆಯಲ್ಲಿ ರಾಹುಲ್​ರ ಈ ಸಂವಾದ ರಾಷ್ಟ್ರ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಆದ್ರೆ ಈಗ ಹೆಚ್​ಎಎಲ್ ರಾಹುಲ್‌ ಸಂವಾದ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ. ಹೆಚ್‌ಎಎಲ್‌ ಆವರಣದಲ್ಲಿ ನೌಕರರರೊಂದಿಗೆ ನಡೆಯಬೇಕಿದ್ದ ಸಂವಾದ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಸಂವಾದ ಕಾರ್ಯಕ್ರಮಕ್ಕೆ ಸೂಕ್ತ ಸ್ಥಳದ ಹುಡುಕಾಟ ನಡೆಸುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕದ ಮಿನ್ಸ್‌ ಸ್ಕ್ವೇರ್‌ ಬಳಿ ಇರುವ ವಿಮಾನ ಪ್ರತಿಮೆ ಪಕ್ಕದಲ್ಲಿ ಸಂವಾದ ಕಾರ್ಯಕ್ರಮಕ್ಕೆ ಚಿಂತನೆ ನಡೆಸುತ್ತಿದೆ. ಈ ಕುರಿತು ಕೆಪಿಸಿಸಿ ಪೊಲೀಸರ ಬಳಿ ಅನುಮತಿ ಕೋರಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv