ನೀಳ ಕೂದಲು ನಿಮ್ಮದಾಗಬೇಕೆ..? ಇಲ್ಲಿದೆ ಪರಿಹಾರ..!

ಕೂದಲೆಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಕೇಶರಾಶಿಯ ಮಾಯಾ ಜಾಲಕ್ಕೆ ಸೆರೆಯಾದವರ ಸಂಖ್ಯೆ ಅದೆಷ್ಟೋ. ಬಾಲ್ಯದಿಂದ ತುಂಬಾ ಆರೈಕೆಯಿಂದ ಪ್ರೀತಿಯಿಂದ ಪೋಷಿಸುತ್ತಿದ್ದ ಕೂದಲು ಮಾಲಿನ್ಯದಿಂದ ಉದುರಿ ಹೋಗುತ್ತಿರುವಾಗ ಮನಸ್ಸಿಗಾಗುವ ಬೇಜಾರು ಅಷ್ಟಿಷ್ಟಲ್ಲ. ಉದ್ದ ಕೂದಲಿರುವವರಿಗೆ ಶಾರ್ಟ್​ ಹೇರ್​ ಅಂದ್ರೆ ಇಷ್ಟ. ಅದೇ ಶಾರ್ಟ್​ ಹೇರ್ ಇರುವವರಿಗೆ ಉದ್ದ ಕೂದಲೆಂದರೆ ಅಚ್ಚುಮೆಚ್ಚು. ಇನ್ನು ಕೂದಲು ಉದುರವ ಸಮಸ್ಯೆ ಇರವವರಂತೂ ನನ್ನ ತಲೆಯಲ್ಲಿ ಕೂದಲು ಇದ್ರೆ ಸಾಕಪ್ಪ, ಅದೇ ನನ್ನ ಖುಷಿ ಎನ್ನುತ್ತಾರೆ. ಮಾರ್ಕೆಟ್​ನಲ್ಲಿರುವ ಹಾನಿಕಾರಕ ಶ್ಯಾಂಪ್​ಗಳು ಒಮ್ಮೆಗೆ ಗಮ್ಮನೆ ಎಂದು ಸುವಾಸನೆ ಕೊಟ್ರು, ಕೂದಲಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗುತ್ತಿವೆ. ಕೂದಲು ಉದುರುವ ಗೋಳು ಯಾರು ಕೇಳ್ತಾರೆ ಅನ್ನೋ ಚಿಂತೆ ಬಿಡಿ. ಮನೆಮದ್ದಿನಿಂದಲೇ ಕೂದಲಿನ ಉತ್ತಮ ಪೋಷಣೆ ಹೇಗ್​ ಮಾಡ್ಬೇಕಂತ ನಾವು ಹೇಳ್ತಿವಿ.

1. ಎಗ್​ ಮಾಸ್ಕ್
ಮನೆಯಲ್ಲಿ ರೆಡಿ ಮಾಡಬಹುದಾದಂತಹ ಉತ್ತಮ ಮನೆಮದ್ದೇ ಎಗ್​ ಮಾಸ್ಕ್. ಮೊಟ್ಟೆ ಎಲ್ಲರಿಗೂ ಚಿರಪರಿಚಿತ ಆಹಾರ. ಆದರೆ ಅದರ ಪೌಷ್ಠಿಕಾಂಶದ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಮೊಟ್ಟೆಯಲ್ಲಿರುವ ವಿಟಮಿನ್​ ‘ಇ’ ಕೂದಲಿನಲ್ಲಾಗುವ ಬ್ರೇಕೆಜ್​ ತಡೆಯುವ ಸಾಮರ್ಥ್ಯ ಹೊಂದಿದೆ. ಮೊಟ್ಟೆಯನ್ನು ಎಣ್ಣೆ ಜೊತೆ ಬೆರೆಸಿ ಉಪಯೋಗಿಸಿದ್ರೆ ಇನ್ನಷ್ಟು ಉತ್ತಮ ರಿಸಲ್ಟ್‌ನ ಕೊಡುತ್ತೆ.

2. ಬಿಸಿ ಎಣ್ಣೆಯಿಂದ ​ಮಾಲೀಶ್
ಕೂದಲಿನ ಉದುರುವಿಕೆಗೆ ಮೂಲ ಕಾರಣ ಪೋಷಣೆಯ ಕೊರತೆ. ಎಣ್ಣೆಯೆಂದರೆ ಹತ್ತು ಮೈಲಿ ದೂರ ಓಡೋ ಫ್ಯಾಷನ್​ ಯುಗ ಇದು. ಎಣ್ಣೆಯಲ್ಲಿ ಕೂದಲಿಗೆ ಬೇಕಾಗುವ ಎಲ್ಲಾ ಪೌಷ್ಠಿಕಾಂಶ ದೊರೆಯುತ್ತೆ. ಆದ್ದರಿಂದ ಬಿಸಿ ಎಣ್ಣೆಯ ಬೆಚ್ಚನೆಯ ಮಾಲೀಶ್​​ ಟೆನ್ಶನ್​ ಕಡಿಮೆ ಮಾಡುತ್ತೆ. ಕೂದಲು ಉದುರುವ ಪ್ರಮಾಣವನ್ನು ಕಡಿಮೆಗೊಳಿಸುತ್ತೆ. ರಾತ್ರಿ ವೇಳೆ ಮಲಗುವ ಮುನ್ನ ಬಿಸಿ ಎಣ್ಣೆಯಿಂದ ಮಾಲೀಶ್ ಮಾಡಬೇಕು. ನಂತರ ಟವಲ್‌ನಿಂದ ಬಿಗಿಯಾಗಿ ಕಟ್ಟಬೇಕು. ಮುಂಜಾವಿನ ವೇಳೆ ತಲೆಗೆ ಸ್ನಾನ ಮಾಡುವ ಮೂಲಕ ಕೂದಲನ್ನು ಉತ್ತಮವಾಗಿ ಪೋಷಿಸಬಹುದು.

3. ಆಲಿವ್​ ಆಯಿಲ್‌ ವಿಶೇಷ ಮಾಸ್ಕ್
ಆಲಿವ್​ ಆಯಿಲ್ ಮತ್ತು ಮಿಯೋನಿ ಕಾಂಬಿನೇಷನ್ ಕೇಳೋಕೆ ವಿಚಿತ್ರವಾಗಿದ್ರು, ಕೂದಲಿನ ಆರೈಕೆಗೆ ಇದು ದಿ ಬೆಸ್ಟ್​ ಕಾಂಬಿನೇಷನ್ ಅಂತಾ ಹೇಳಿದ್ರೆ ತಪ್ಪಗಲಾರದು. ಆಲಿವ್ ಆಯಿಲ್, ಮಿಯೋನಿ ಮತ್ತು ವೈಟ್​ ವಿನೇಗರ್​ನ ಖಡಕ್​ ಟ್ರಾಯೋ ಕೂದಲನ್ನು ಸ್ಮೂತ್​ ಮಾಡುತ್ತೆ. ಇದರ ಮಾಸ್ಕನ್ನ ಕೂದಲಿಗೆ ಅಪ್ಲೈ ಮಾಡಿ. ಅದು ಸಂಪೂರ್ಣವಾಗಿ ಡ್ರೈ ಆದ ಮೇಲೆ ನೀರಿನಿಂದ ಕೂದಲನ್ನು ತೊಳೆಯಬೇಕು.

4. ಶ್ಯಾಂಪುವಿನೊಂದಿಗೆ ವಿಟಮಿನ್ ‘ಇ’ ಮಿಶ್ರಣ
ವಿಟಮಿನ್​ ‘ಇ’ಯಲ್ಲಿರುವ ಪೌಷ್ಠಿಕಾಂಶಗಳು ತ್ವಚೆ ಮತ್ತು ಕೂದಲಿಗೆ ಉತ್ತಮ ಆರೈಕೆ ಮಾಡುತ್ತೆ. ವಿಟಮಿನ್ ‘ಇ’ ಯ ಗುಳಿಗಳನ್ನು ಶ್ಯಾಂಪುವಿನ ಜೊತೆಗೆ ಬೆರೆಸುವ ಮೂಲಕ ಉತ್ತಮ ಪ್ರತಿಫಲ ಪಡೆಯಬಹುದು.

5. ಈರುಳ್ಳಿ ರಸ
ಕಣ್ಣಲ್ಲಿ ನೀರನ್ನು ಉಂಟು ಮಾಡುವ ಈರುಳ್ಳಿಗೆ ಹಲವಾರು ನಾಮಕರಣ. ತಿಂಡಿ-ತಿನಿಸುಗಳಲ್ಲಿ ಸೇರಿ ಸವಿರುಚಿ ನೀಡಿದ್ರೆ, ಈರುಳ್ಳಿಯ ರಸ ಕೂದಲಿನ ಮೂಲವನ್ನು ದೃಢವಾಗಿಸುತ್ತದೆ. ಅಲ್ಲದೆ ಹೊಸ ಕೂದಲ ಬೆಳವಣಿಗೆಗೆ ಸಹಾಯಕವಾಗಿದೆ. ಈರುಳ್ಳಿಯ ರಸವನ್ನು ಹಚ್ಚಿ 30 ನಿಮಿಷದ ನಂತರ ವಾಷ್ ಮಾಡಬೇಕು. ಈ ರೀತಿ ನಾವು ನಮ್ಮ ಕೂದಲನ್ನು ಸುಲಭವಾಗಿ ಪೋಷಿಸಬಹುದು.

6. ಬಾಳೆಹಣ್ಣು
ಬಾಳೆಹಣ್ಣು ಅಗ್ಗವಾಗಿ ಸಿಗುವ ರುಚಿಯಾದ ಫಲ. ಹೇಗೆ ಬಾಳೆಹಣ್ಣಿನ ಸೇವನೆ ಪಚನ ಕ್ರಿಯೆಯಲ್ಲಿ ಸಹಾಯಕವೋ ಹಾಗೇನೇ ಬಾಳೆಹಣ್ಣು, ಆಲಿವ್ ಆಯಿಲ್ ಮತ್ತು ಜೇನಿನ ಸರಿಯಾದ ಮಿಶ್ರಣ ಕೂದಲು ಉದುರುವ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ.

 

7. ಆಲೋವೆರ
ಆಲೋವೆರ ಶಬ್ಧ ಇತ್ತೀಚಿನ ದಿನಗಳಲ್ಲಿ ತುಂಬಾನೇ ಕೇಳಿ ಬರುತ್ತಿದೆ. ಅದರಲ್ಲಿರುವ ಉತ್ತಮ ಗುಣಗಳ ಲಾಭವನ್ನ ತಮ್ಮದಾಗಿಸಿಕೊಳ್ತಾ ಇದ್ದಾರೆ. ಆಲೋವೆರಾ ಮತ್ತು ಆಮಂಡ್​ ಆಯಿಲ್​ನ ಮಿಶ್ರಣ ಕೂದಲಿನ ಸ್ವಾಸ್ಥ್ಯ ಕಾಪಾಡುತ್ತೆ. ಮನೆಯಲ್ಲೇ ಕೂದಲು ಉದುರುವ ಸಮಸ್ಯೆಗೆ ಪರಿಹಾರವಿದ್ದಾಗ ಚಿಂತಿಸುವ ಅಗತ್ಯವಿಲ್ಲ. ಚಿಂತೆ ಬಿಟ್ಟು ಇಂತಹ ಸುಲಭ ಉಪಾಯ ತಮ್ಮದಾಗಿಸಿಕೊಂಡು ದಪ್ಪವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿ.

ವಿಶೇಷ ಬರಹ- ಪ್ರಫುಲ್ಲ ಕೋಟ್ಯಾನ್
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv