ಯಡಿಯೂರಪ್ಪ ಅಂಡ್ ಡ್ರಾಮಾ ಕಂಪನಿ ಈ ಬಾರಿ ಕರ್ನಾಟಕದಲ್ಲಿ ಕ್ಲೋಸ್ ಆಗಲಿದೆ: ಹೆಚ್​.ಡಿ ರೇವಣ್ಣ

ಹಾಸನ: ಬಿಜೆಪಿ ಅಭ್ಯರ್ಥಿ ನಾನು ರೌಡಿ ಎಂದು ಹೇಳಿಕೊಂಡಿದ್ದಾರೆ. ಅವರನ್ನು ಮನೆಗೆ ಕಳಿಸಲು ಜನ ತೀರ್ಮಾನ ಮಾಡಿದ್ದಾರೆ. ದೇವೇಗೌಡರು ದಲಿತ ಸಮಾಜಕ್ಕೆ ಸಾಕಷ್ಟು‌ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್​ಗೆ ಟೋಪಿ ಹಾಕಿ ಹೋಗಿರೋ ವ್ಯಕ್ತಿ ಹತ್ರ  ನಾನು ದಲಿತರ ಬಗ್ಗೆ ತಿಳಿಯಬೇಕಿಲ್ಲ ಎಂದು  ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ಮಂಜು ವಿರುದ್ಧ   ಸಚಿವ ಹೆಚ್​.ಡಿ ರೇವಣ್ಣ ಕಿಡಿಕಾರಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅಂಡ್ ಡ್ರಾಮಾ ಕಂಪನಿ ಈ ಬಾರಿ ಕರ್ನಾಟಕದಲ್ಲಿ ಕ್ಲೋಸ್ ಆಗಲಿದೆ ಎಂದು ಹೇಳಿದ್ರು.  ಕೆ.ಎಸ್.ಈಶ್ವರಪ್ಪ ನಿಮ್ಮ ಬಗ್ಗೆ ಲಘುವಾಗಿ ಮಾತನಾಡುತ್ತಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವನಿಗೆ ಏನಾಗಿದೆಯೋ ಗೊತ್ತಿಲ್ಲ, ಒಂದು ಒಳ್ಳೇ ನಿಂಬೆ ಹಣ್ಣು ಕೊಡೋಣ ಎಂದು ವ್ಯಂಗ್ಯ ಮಾಡಿದ್ರು. ಇದೇ ವೇಳೆ ನಾಳೆ  ನಗರದಲ್ಲಿ ದಲಿತ ಸಮಾವೇಶ ನಡೆಯಲಿದೆ. ಡಿಸಿಎಂ ಪರಮೇಶ್ವರ್,ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ, ಸಿಎಂ ಇಬ್ರಾಹಿಂ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv