ಯಡಿಯೂರಪ್ಪ, ಈಶ್ವರಪ್ಪನಿಗೂ ಒಂದು ನಿಂಬೆ ಹಣ್ಣು ಕೊಡ್ತೀನಿ: ಹೆಚ್​.ಡಿ ರೇವಣ್ಣ

ಮೈಸೂರು: ಹಳ್ಳಿಕಡೆ ಹೋದಾಗ ಜನ ನಿಂಬೆಹಣ್ಣು ಕೊಡ್ತಾರೆ.. ಅದನ್ನ  ಬಿಸಾಕೋಕ್ಕೆ ಆಗುತ್ತಾ ಎಂದು ಲೋಕೋಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೇವಣ್ಣ ನಿಂಬೆ ಹಣ್ಣು ಹಿಡ್ಕೊಂಡ್ ಓಡಾಡೋದು ಯಾಕೆ.? ಅನ್ನೋ ಪ್ರಶ್ನೆಗೆ ಉತ್ತರಿಸಿ, ಹಳ್ಳಿ ಕಡೆ ಹೋದಾಗ ಜನರು ಕೋಡ್ತಾರೆ. ಅದನ್ನ ಬಿಸಾಡೋಕೆ ಆಗುತ್ತಾ ಅಂತಾ ಪ್ರಶ್ನಿಸಿದ್ರು. ಇದೇ ವೇಳೆ ಯಡಿಯೂರಪ್ಪ, ಈಶ್ವರಪ್ಪನಿಗೂ ಒಂದು ನಿಂಬೆ ಹಣ್ಣು ಕೊಡ್ತೀನಿ.. ಪಾಪ ಅವರಿಗೂ ಯಾರು ಮಾಟ ಮಾಟ ಮಂತ್ರ ಮಾಡಿಸದ ಹಾಗೇ ಇರ್ಲಿ ಅಂತ ಎಂದು ಲೇವಡಿ ಮಾಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv