ಅತಿವೃಷ್ಟಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಸಚಿವ ರೇವಣ್ಣ ಗರಂ

ಹಾಸನ: ಜಿಲ್ಲೆಯಲ್ಲಿ ಅತಿವೃಷ್ಟಿ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಗರಂ ಆಗಿದ್ದಾರೆ.
ಹಾಸನ ಜಿ.ಪಂ. ಸಭಾಂಗಣದಲ್ಲಿ ರೇವಣ್ಣ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ‌ಸಭೆ ನಡೆಸಲಾಗುತ್ತಿದೆ. ಅತಿವೃಷ್ಟಿ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಜಿಲ್ಲೆಯ ವಿವಿಧೆಡೆ ಮಳೆ ಹಾನಿಯಿಂದ ಬೆಳೆ ನಷ್ಟವಾಗಿರುವ ಕುರಿತು ಮಾಹಿತಿ ನೀಡುವಂತೆ ಸಚಿವ ರೇವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಆದರೆ ಕೆಲ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿಲ್ಲ. ಈ ಕಾರಣಕ್ಕೆ ಅಧಿಕಾರಿಗಳ ವಿರುದ್ಧ ಸಚಿವ ರೇವಣ್ಣ ಗರಂ ಆಗಿದ್ದಾರೆ.
ಪ್ರತಿ ದಿನ ಮಳೆ ನಷ್ಟದ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಬೇಕು. ಹೊಗೆಸೊಪ್ಪು, ರಾಗಿ, ಶುಂಠಿ ಸೇರಿ ಇತರೆ‌ ಬೆಳೆ ನಷ್ಟದ ಬಗ್ಗೆ ನಾಳೆ ಸಂಜೆಯೊಳಗೆ ಜಿಲ್ಲಾಧಿಕಾರಿಗೆ ವರದಿ ನೀಡುವಂತೆ ರೇವಣ್ಣ ಸೂಚನೆ ನೀಡಿದ್ರು. ಅಲ್ಲದೇ ನಷ್ಟಕ್ಕೊಳಗಾದ ರೈತರಿಗೆ ಕೂಡಲೇ ಪರಿಹಾರದ ಚೆಕ್ ವಿತರಿಸಬೇಕು. ಇನ್ನು ಇದೇ ವೇಳೆ ಅತಿವೃಷ್ಟಿ ಬಗ್ಗೆ ಸರಿಯಾಗಿ ಮಾಹಿತಿ ನೀಡಿದ ಅಧಿಕಾರಿಗಳಿಗೆ ಸಭೆಯಿಂದ ಹೊರ ನಡೆಯಿರಿ ಎಂದು ಗುಡುಗಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv