ಅಭಿಮಾನಕ್ಕಾಗಿ 3 ದಿನ ಮೊದಲೇ ಹುಟ್ಟುಹಬ್ಬ ಆಚರಿಸಿಕೊಂಡ ದೇವೇಗೌಡ

ಉಡುಪಿ: ಕಾರ್ಯಕರ್ತರ ಅಭಿಮಾನದ ಮೇರೆಗೆ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು 3 ದಿನ ಮೊದಲೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಪಂಚಕರ್ಮ, ಮಣಿಗಂಟು ನೋವು ಹಿನ್ನೆಲೆ ದೇವೇಗೌಡ ದಂಪತಿ ಮೂಳೂರಿನ ಸಾಯಿರಾಧಾ ಹೆಲ್ತ್ ರೆಸಾರ್ಟ್​ನಲ್ಲಿ ಒಂದು ವಾರ ಕಾಲ ಪ್ರಕೃತಿ ಚಿಕಿತ್ಸೆ ಪಡೆದುಕೊಂಡಿದ್ರು. ಇಂದು ಚಿಕಿತ್ಸೆ ಮುಗಿಸಿಕೊಂಡು ಉಡುಪಿಯಿಂದ ಶೃಂಗೇರಿಗೆ ತೆರಳಿದ್ರು. ಇದಕ್ಕೂ ಮೊದಲು ರೆಸಾರ್ಟ್ ಆಡಳಿತ ಮಂಡಳಿ ಗೌಡರಿಗೆ ಗೌರವ ಸಲ್ಲಿಸಿ, ಬೀಳ್ಕೊಟ್ಟರು. ಇದೇ ತಿಂಗಳ 18ಕ್ಕೆ ದೇವೇಗೌಡರ 86ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆ ಜಿಲ್ಲಾ ಜೆಡಿಎಸ್ ಮುಖಂಡರು  ಗೌಡರ ಕೈಯಲ್ಲಿ ಕೇಕ್​ ಕಟ್​ ಮಾಡಿಸುವ ಮೂಲಕ ಅಡ್ವಾನ್ಸ್​ ಹುಟ್ಟುಹಬ್ಬ ಆಚರಿಸಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv