ದಾವಣಗೆರೆಯಿಂದ ಹೆಚ್​.ಬಿ.ಮಂಜಪ್ಪಗೆ ಕೈ ಟಿಕೆಟ್​

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಹೆಚ್​.ಬಿ.ಮಂಜಪ್ಪಗೆ ಕಾಂಗ್ರೆಸ್​ ಟಿಕೆಟ್ ಫೈನಲ್​ ಆಗಿದೆ. ನಿನ್ನೆ ಎಐಸಿಸಿಯಿಂದ ಪ್ರಕಟವಾದ ಅಧಿಕೃತ ಪಟ್ಟಿಯಲ್ಲಿ ಮಂಜಪ್ಪ ಹೆಸರು ಘೋಷಣೆಯಾಗಿದೆ. ದಾವಣಗೆರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಮಂಜಪ್ಪ ಈಗ ಲೋಸಭಾ ಅಖಾಡಕ್ಕೆ ಧುಮುಕಿದ್ದಾರೆ. ಇನ್ನು ಮಂಜಪ್ಪ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಜಪ್ಪಗೆ ಟಿಕೆಟ್​ ಕೊಡುವಂತೆ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್​ ವರಿಷ್ಟರಿಗೆ ಮನವಿ ಮಾಡಿದ್ದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv