ಶೋಲೆ ಸ್ಟೈಲ್​​​​ನಲ್ಲಿ ಬೆದರಿಸಿ ಜಾಬ್​ ಗಿಟ್ಟಿಸಿಕೊಂಡ ಯುವತಿ…!

ಗುರುಗ್ರಾಮ್​: ಬಾಲಿವುಡ್​​ನ ಹೆಸರಾಂತ ಶೋಲೆ ಚಿತ್ರವನ್ನು ಎಲ್ಲರೂ ನೋಡಿರ್ತೀರಿ. ಈ ಚಿತ್ರದಲ್ಲಿ ನಟ ಧರ್ಮೇಂದ್ರ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಾಟಕವಾಡುವ ದೃಶ್ಯವೊಂದಿದೆ. ಧಮೇಂದ್ರ ನೀರಿನ ಟ್ಯಾಂಕ್ ಮೇಲೆ ಏರಿ ನಾನು ಹಾರಿ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತ ಬೆದರಿಸುತ್ತಾರೆ. ಇದೇ ರೀತಿಯಲ್ಲಿ ಯುವತಿಯೊಬ್ಬಳು ರಂಪಾಟ ಮಾಡಿದ್ದಾಳೆ.
ಸೈಬರ್ ಸಿಟಿ ಗುರುಗ್ರಾಮ್​​ನಲ್ಲಿ ಯುವತಿಯೊಬ್ಬಳು, ಕಂಪನಿಯಿಂದ ತನ್ನನ್ನ ವಜಾಗೊಳಿಸಿದ್ದಕ್ಕೆ ಹೈ ಡ್ರಾಮಾ ಮಾಡಿದ್ದಾಳೆ. ಕಟ್ಟಡದ ತುದಿಯಲ್ಲಿ ನಿಂತು ತನ್ನ ಕೆಲಸ ವಾಪಸ್ ಕೊಡದಿದ್ರೆ, ಕೆಳಗೆ ಬಿದ್ದು ಸಾಯ್ತೀನಿ ಅಂತ ಬೆದರಿಸಿದ್ದಾಳೆ. ಗುರುಗ್ರಾಮ್ ಸೆಕ್ಟರ್ 18ರ ಖಾಸಗಿ ಸಲಹಾ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಯುವತಿಯನ್ನ, ತೆಗೆದು ಹಾಕಲಾಗಿತ್ತಂತೆ. ಇದ್ರಿಂದ ಮನನೊಂದು ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ. ಸಹದ್ಯೋಗಿಗಳು ಬೇಡಿಕೊಂಡರೂ ಕೆಳಗಿಳಿದು ಬರಲು ಆಕೆ ನಿರಾಕರಿಸಿದ್ದಾಳೆ. ಪೊಲೀಸರು ಬರ್ತಿದ್ದಂತೆ ಕೂಗಾಟ ಶುರು ಮಾಡಿದ್ದಾಳೆ. ಕಡೆಗೆ ಕಂಪನಿ ಹಿರಿಯ ಅಧಿಕಾರಿಗಳು ಕೆಲಸದಿಂದ ತೆಗೆಯುವುದಿಲ್ಲ ಎಂಬ ಭರವಸೆ ನೀಡಿದ ಮೇಲಷ್ಟೇ, ಆಕೆ ಕೆಳಗಿಳಿದು ಬಂದಿದ್ದಾಳೆ. ಈ ರಾದ್ಧಾಂತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು ನೆಟ್ಟಗರು ಈಕೆಯನ್ನ ಲೇಡಿ ಧರ್ಮೆಂದ್ರ ಅಂತ ಕರೆದಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv