ಮೌಲ್ಯಮಾಪಕರಿಗೆ ಬಾರದ ಸಂಭಾವನೆ, ಸಿಎಂಗೆ ಗುಂಡೂರಾವ್​​ ಪತ್ರ..!

ಬೆಂಗಳೂರು: ದ್ವಿತೀಯ ಪಿಯುಸಿ ಮೌಲ್ಯಮಾಪನದ ಗೌರವ ಸಂಭಾವನೆ ಬಿಡುಗಡೆಯಲ್ಲಿ ವಿಳಂಬ ಸಂಬಂಧ ಹೆಚ್.ಡಿ.ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿ 20 ದಿನಗಳು ಕಳೆದಿವೆ. ಈವರೆಗೂ ಮೌಲ್ಯಮಾಪನ ಮಾಡಿರುವ ಶಿಕ್ಷಕರಿಗೆ ಗೌರವ ಸಂಭಾವನೆ ನೀಡಿಲ್ಲ. ಇದು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಬೇಕಿದ್ದ ಗೌರವ ಸಂಭಾವನೆಯಾಗಿದ್ದು, 16 ಸಾವಿರ ಶಿಕ್ಷಕರಿಗೆ ಗೌರವ ಸಂಭಾವನೆ ನೀಡಬೇಕಿದೆ. ನಮ್ಮ ಪಕ್ಷದ ಕೆಲ ಕಾರ್ಯಕರ್ತರು ಕೂಡ ನಿಮಗೆ ಪತ್ರ ಬರೆದು, ಪ್ರಕರಣವನ್ನು ನಿಮ್ಮ ಗಮನಕ್ಕೆ ತಂದಿದ್ದಾರೆ. ತಾವು ಇಲಾಖೆಯ ಪರವಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ, ಮೌಲ್ಯಮಾಪನ ಮಾಡಿರುವ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ನೀವು ಸೂಚನೆ ನೀಡಿ ಅಂತಾ ದಿನೇಶ್ ಗುಂಡೂರಾವ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv