ರೈಫಲ್ ಕಳ್ಳತನ ಆರೋಪ: ನಾಲ್ವರು ಪೇದೆಗಳ ಅಮಾನತ್ತು

ಬೆಂಗಳೂರು: ರೈಫಲ್ ಕಳ್ಳತನದ ಆರೋಪ ಹಿನ್ನೆಲೆ ನಾಲ್ವರು ಪೇದೆಗಳ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕರ್ತವ್ಯಲೋಪ ಹಿನ್ನಲೆ ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಪೇದೆಗಳಾದ, ಆನಂದ್ ಕೊಳೆಕಾರ್ , ಪರಮಾನಂದ ಕೋಟಿ , ಅಶೋಕ್ ಬಿರಾದರ್ ಹಾಗೂ ಬಸವರಾಜ್ ಬೆಳಗಾವಿ ಅಮಾನತುಗೊಂಡವರು.

ಮೇಲಾಧಿಕಾರಿಗಳ ಮೇಲಿನ ದ್ವೇಷಕ್ಕೆ ರೈಫಲ್ ಕದ್ದ ಪೇದೆಗಳು..!
ಚುನಾವಣೆ ವೇಳೆ ಸಾರ್ವಜನಿಕರು ರೈಫಲ್‌ಗಳನ್ನು ಠಾಣೆಗೆ ಸರೆಂಡರ್ ಮಾಡಿದ್ದರು. ಇದರ ಉಸ್ತುವಾರಿಯನ್ನ ಕುಮಾರಸ್ವಾಮಿ ಠಾಣೆಯ ಪಿಎಸ್ಐ ಸುಮಾ ಅವರಿಗೆ ವಹಿಸಲಾಗಿತ್ತು. ಪಿಎಸ್ಐ ಗೈರು ಹಾಜರಾಗಿದ್ದಾಗ, ಕಳೆದ ಏಪ್ರಿಲ್ ತಿಂಗಳಿನಲ್ಲಿ ಸ್ಟೇಷನ್‌ನಲ್ಲೇ ಎರಡು ಡಬಲ್ ಬ್ಯಾರಲ್ ರೈಫಲ್‌ಗಳನ್ನ ಕದ್ದಿದ್ದರು ಅಂತಾ ಆರೋಪ ಕೇಳಿ ಬಂದಿತ್ತು.
ಈ ಹಿಂದೆ ಪೇದೆಗಳು ಡಿಸಿಪಿ ಬಳಿ ತೆರಳಿ, ಠಾಣೆ ಇನ್​​ಸ್ಪೆಕ್ಟರ್​ ಗುರುಪ್ರಸಾದ್ ಮೇಲೆ ತಾರತಮ್ಯದ ದೂರನ್ನು ನೀಡಿದ್ದರು. ಆದ್ರೆ ಈ ಸುಳ್ಳು ಎಂದು ಅರಿತ ಡಿಸಿಪಿ, ಪೇದೆಗಳ ಇನ್​​​ಕ್ರಿಮೆಂಟ್ ಕಟ್ ಮಾಡಿದ್ರು. ಇದ್ರಿಂದ ಕೋಪಗೊಂಡ ಪೇದೆಗಳು ಏನಾದ್ರೂ ಮಾಡಿ ಸಬ್​​ ಇನ್​​ಸ್ಪೆಕ್ಟರ್‌ನ್ನ ಸಸ್ಪೆಂಡ್ ಮಾಡಿಸಬೇಕು ಅಂತಾ ಪ್ಲ್ಯಾನ್ ಮಾಡಿದ್ದರು. ಇನ್ನು ರೈಫಲ್‌ಗಳ ಉಸ್ತುವಾರಿಯನ್ನ ಪಿ.ಎಸ್.ಐ ಸುಮಾ ನೋಡಿಕೊಳ್ತಿದ್ರು. ರೈಫಲ್ ಕಳುವಾದ್ರೆ ಪಿಎಸ್ಐ ಸುಮಾ ಹಾಗೂ ಇನ್​​ಸ್ಪೆಕ್ಟರ್ ಮೇಲೆ ತನಿಖೆ ಆಗಿ ಸಸ್ಪೆಂಡ್ ಆಗ್ತಾರೆ ಅಂತ ಪೇದೆಗಳು ಭಾವಿಸಿದ್ದರು. ಅದರಂತೆ ಕಳೆದ ಚುನಾವಣೆ ವೇಳೆ ಲೈಸೆನ್ಸ್ ಇರುವ ರೈಫಲ್‌ಗಳನ್ನ ಸಾರ್ವಜನಿಕರು ಪೊಲೀಸ್ ಠಾಣೆಗೆ ಒಪ್ಪಿಸಬೇಕಿತ್ತು. ಈ ವೇಳೆ ಸಾರ್ವಜನಿಕರು ನೀಡಿದ್ದ ರೈಫಲ್‌ಗಳನ್ನು ಪೇದೆಗಳು ಕದ್ದಿದ್ದರು ಎನ್ನಲಾಗಿದೆ.

ವಿಚಾರಣೆ ವೇಳೆ ತಪ್ಪೋಪಿಕೊಂಡ ನಾಲ್ವರು ಪೇದೆಗಳು..!
ಈ ಬಗ್ಗೆ ಠಾಣೆ ಸಿಬ್ಬಂದಿ ಪೇದೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತೀವ್ರ ವಿಚಾರಣೆ ನಡೆಸಿದಾಗ ಪೇದೆಗಳ ಬಣ್ಣ ಬಯಲಾಗಿದೆ. ವಿಚಾರಣೆ ನಡೆಸಿದಾಗ, ಇನ್​​ಸ್ಪೆಕ್ಟರ್ ಹಾಗೂ ಪಿಎಸ್ಐ ಮೇಲೆ ಆರೋಪ ಬರಲಿ ಎಂದು ರೈಫಲ್‌ಗಳನ್ನ ಕದ್ದು ಮುಚ್ಚಿಟ್ಟಿದ್ದಾಗಿ ಪೇದೆಗಳು ಒಪ್ಪಿಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv