ರಾಜ್ಯದಲ್ಲಿ ಭೂಕಂಪ ಆಗುತ್ತೆ ಅಂತಾ ಯಾವ ವಿಜ್ಞಾನಿ ಹೇಳಿದ್ರೋ ಗೊತ್ತಿಲ್ಲ.: ಜಿ​ಟಿಡಿ

ಮೈಸೂರು: ರಾಜ್ಯದಲ್ಲಿ ಭೂಕಂಪ ಆಗುತ್ತೆ ಅಂತಾ ಯಾವ ವಿಜ್ಞಾನಿ ಹೇಳಿದ್ರೋ ಗೊತ್ತಿಲ್ಲ ಅಂತಾ ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​ಗೆ ಸಚಿವ ಜಿ.ಟಿ. ದೇವೇಗೌಡ ಟಾಂಗ್​ ಕೊಟ್ಟಿದ್ದಾರೆ. ನಿನ್ನೆ ಪ್ರಕಾಶ್ ಜಾವ್ಡೇಕರ್​ ರಾಜ್ಯದಲ್ಲಿ ಯಾವಾಗ ಬೇಕಾದ್ರೂ ಭೂಕಂಪ ಆಗುತ್ತೆ ಅಂತಾ ಹೇಳಿದ್ದರು. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಪ್ರಕಾಶ್​ ಜಾವ್ಡೇಕರ್​​ ಅವರು HRD ಮಿನಿಸ್ಟರ್. ಹಾಗಾಗಿ ವೈಜ್ಞಾನಿಕವಾಗಿ ಭೂಕಂಪ ಆಗುತ್ತೆ ಅಂತಾ ಮಾತನಾಡಿದ್ದಾರೆ. ರಾಜ್ಯದಲ್ಲಿ ರಾಜಕೀಯ ಭೂಕಂಪ ನಡೆಯುತ್ತೆ ಅಂತಾ ಹೇಳಿಲ್ಲ ಎಂದಿದ್ದಾರೆ. ಇನ್ನು ಬಿಜೆಪಿಯವ್ರು ಸಮ್ಮಿಶ್ರ ಸರ್ಕಾರದ ಶಾಸಕರ ದಿಕ್ಕು ತಪ್ಪಿಸೋ ಕೆಲಸ ಮಾಡ್ತಿದ್ದಾರೆ. ಆದರೇ ಅವರು ಈಗ ಏನು ಮಾಡಿದ್ರೂ ನಮ್ಮ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ನಮ್ಮ ಶಾಸಕರು ಮುಂಬೈನಲ್ಲಿ ಪ್ಲೈಟ್ ಹತ್ತಿದ್ದಾರೆ, ರೆಸಾರ್ಟ್​ಲ್ಲಿದ್ದಾರೆ ಅನ್ನೋದೆಲ್ಲಾ ಈಗ ಮುಗಿದಿದೆ ಅಂತಾ ವ್ಯಂಗ್ಯವಾಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv